Wednesday, March 2, 2011

 ಸಾಗರ ಜಾತ್ರೆ ಹಾಗು ಸಾಗರ ಸುತ್ತ ಮುತ್ತ ತಿರುಗಾಟ..
 
24/02/2011, ಗುರುವಾರ ರಾತ್ರಿ 10.30 ರ ಗಜಾನನ ಬಸ್ಸಿಗೆ ಅಕ್ಷರ, ಅಕ್ಷರ ಅಮ್ಮ, ಅಕ್ಕ, ರವಿ(P.T) ಮತ್ತು ನಾನು ಸಾಗರಕ್ಕೆ ಹೊರಟ್ವಿ. ಸಾಗರದ ಮಾರಿಕಾಂಬ ಜಾತ್ರೆಗೆ ಹಾಗೂ ಅಲ್ಲಿ ಸುತ್ತ, ಮುತ್ತ ಓಡಾಡಿಕೊಂಡು ಬರೋದು ನಮ್ಮ plan. ಶುಕ್ರವಾರ ಬೆಳಗ್ಗೆ 6.30 ಗೆ ಸಾಗರ ತಲುಪಿದ್ವಿ. ಅಕ್ಷರನ ಅತ್ತೆ ಮನೆಗೆ ಹೋಗಿ ಫ್ರೆಶ್ ಆದ್ವಿ. ಅಲ್ಲಿಂದ ನಾನು ನಮ್ಮೂರಿಗೆ ಹೊರಟೆ. ಮನೆಗೆ ಹೋಗಿ ಸ್ನಾನ, ತಿಂಡಿ ಮುಗಿಸಿ ತಕ್ಷಣ ಸಾಗರ ಬಂದು ಇವರನ್ನೆಲ್ಲ ಕೂಡಿಕೊಂಡೆ. ಸಾಗರ ಪೇಟೆಯಲ್ಲಿ ಸ್ವಲ್ಪ ಕೆಲಸಗಳಿತ್ತು ಅದನ್ನೆಲ್ಲ ಮುಗಿಸಿ ಮತ್ತೆ ಅತ್ತೆ ಮನೆಗೆ ಬಂದು ಊಟ ಮಾಡಿ, ಸ್ವಲ್ಪ ರೆಸ್ಟ್ ಮಾಡಿದ್ವಿ. ಸಂಜೆ 6 ಗಂಟೆ ಸುಮಾರಿಗೆ ಎಲ್ಲರೂ ಜಾತ್ರೆಗೆ ಹೋಗೋದು ಅಂತ ತೀರ್ಮಾನ ಮಾಡಿ ಹೊರಟಿದ್ದಾಯ್ತು. ಅಮ್ಮ, ಅಕ್ಕ ಹಾಗೂ ಬೇರೆ ನೆಂಟರನ್ನೆಲ್ಲ ಒಟ್ಟಿಗೆ ಕಳಿಸಿ ನಾವು ಜಾತ್ರೆಗೆ ಹೋದ್ವಿ. ಅಲ್ಲಿ ಮಂಕಾಳೆ ಸಂದೀಪ ಹಾಗೂ ಮಂಕಾಳೆ ಹುಡುಗ್ರು ನಮ್ಮ ಜೊತೆ ಸೇರಿದರು. ಬಸ್ ಸ್ಟ್ಯಾಂಡ್ ನಿಂದ, ಪೋಸ್ಟ್ ಆಫೀಸ್ ಹತ್ತಿರ ಬರುವ ಹೊತ್ತಿಗೆ ಆ ಗಲಾಟೆ, ಆ ಜನ ಜಂಗುಳಿ ನೋಡಿ ತಲೆ ಕೆಟ್ಟ ಹಾಗೆ ಆಯ್ತು. ಮೊದಲೆಲ್ಲ ಇದೆ ಜಾತ್ರೆನಲ್ಲಿ ಸಂಜೆ 5 ಗಂಟೆಗೆ  ಬಂದ್ರೆ ಬೆಳಗಿನ ಜಾವ 3 ಗಂಟೆ ವರೆಗೂ ಇರ್ತ ಇದ್ವಿ. ಈಗ ಅರ್ಧ ಗಂಟೆ ಇರೋದಕ್ಕೂ  ಆಗ್ತಾ ಇಲ್ಲ.  ಏನೋ ಕಿರಿಕಿರಿ. ಯಾವಾಗ ಇಲ್ಲಿಂದ ಹೋಗ್ತಿನೋ ಅನ್ನಿಸುವಷ್ಟು ಹಿಂಸೆ. ನನ್ನದೇ ಸ್ಥಿತಿ ಅಕ್ಷರ ಮತ್ತು P . T  ಗೆ ಕೂಡ ಆಗಿತ್ತು. 

ಸೀದಾ ಪೋಸ್ಟ್ ಆಫೀಸ್ ಡೌನ್ ನಲ್ಲೆ ಇಳಿದು ಮಾರಿಗುಡಿ ಹಿಂಭಾಗದ 'ಪಡಿಯಾರ್' ಅಂಗಡಿಗೆ ಬಂದು ಕೂತಿದ್ದಾಯ್ತು. ಅಲ್ಲೇ ತುಂಬಾ ಜನ ಹಳೆಯ ಗೆಳೆಯರು ಸಿಕ್ಕಿದರು. ಅಷ್ಟರಲ್ಲಿ ನಮ್ಮ ಮಂಕಾಳೆ ಸಂದೀಪ ಜಾತ್ರೆ ಮುಗಿಸಿ ಬಂದು ನಮ್ಮ ಜೊತೆ ಸೇರಿಕೊಂಡ. ನಾವು 4 ಜನ ಹೋಟೆಲ್ ಗೆ ಹೋಗಿ ಹೊಟ್ಟೆ ತುಂಬಾ ಅಕ್ಕಿ ರೊಟ್ಟಿ ತಿಂದು ಮನೆಗೆ ಬಂದ್ವಿ. ನಮ್ಮ ಇನ್ನೊಬ್ಬ ಬೇಲೂರಿನ ದೋಸ್ತ್  ಸಂಜು  ರಾತ್ರಿ ಮನೆಗೆ ಬಂದು ನಮ್ಮ ಜೊತೆ ಸೇರಿದ.
ಇನ್ನು ಶನಿವಾರ ಆರಾಮಾಗಿ ಎದ್ದು, ಸ್ನಾನ, ತಿಂಡಿ ಮುಗಿಸಿ,  ವರದಳ್ಳಿಗೆ ಹೋಗೋಣ ಅಂತ ಹೊರಟ್ವಿ. ಮತ್ತೆ ನಾವು 4 ಜನ ಪಡಿಯಾರ್ ಅಂಗಡಿಗೆ ಬಂದ್ವಿ. ಅಷ್ಟೊತ್ತಿಗೆ ಮಂಕಾಳೆ ಸಂದೀಪ ಕೂಡ ಬಂದಿದ್ದ. ಕಾರ್ ತಗೊಂಡು ವರದಳ್ಳಿಗೆ 5 ಜನ ಹೋದ್ವಿ. ದರ್ಶನ ಮಾಡಿ, ಧರ್ಮ ಧ್ವಜಕ್ಕೆ ಹೋಗಿ ಬಂದು ಊಟ ಮಾಡಿ ಹೆಗ್ಗೋಡಿನ ನೀನಾಸಂ ಗೆ ಹೊರಟ್ವಿ. ನೀನಾಸಂ ನೋಡಿ, ಅಲ್ಲೇ ಖಾದಿ ವಸ್ತ್ರದ ಅಂಗಡಿ "ಚರಕ" ದಲ್ಲಿ ಎಲ್ಲರೂ ಬಟ್ಟೆ ತಗೊಂಡ್ವಿ.

ಹೆಗ್ಗೋಡಿನಿಂದ  ಸಾಗರ ಬಂದು  ಬೆಳೆಯೂರಿನ ನಮ್ಮನೆಗೆ ಅಕ್ಕ , ಅಮ್ಮ ಜೊತೆ ಹೋಗಿದ್ದಾಯ್ತು. ಮನೆಯಲ್ಲಿ ಅಮ್ಮ ಮಾಡಿದ ಕಾಫಿ ಮತ್ತು ಸ್ನಾಕ್ಸ್  ತಿಂದು ಸಾಗರ ಬಂದ್ವಿ. ಮತ್ತೆ ಜಾತ್ರೆ ಪೇಟೆ ಒಮ್ಮೆ ದೂರದಿಂದ ನೋಡಿ ನಮ್ಮ ಮಾಮೂಲಿ 'ಅಡ್ಡಾ' ಗೆ ಬಂದು ಕೂತ್ವಿ. ನಮ್ಮ ಜೊತೆ  ಇವತ್ತಿನ ಹೊಸ ಅಥಿತಿ ನಮ್ಮ ಸಂಜು. ಲೇಟ್ ಆಗಿ ಮಂಕಾಳೆ ಸಾಹೇಬರು ನಮ್ಮ ಜೊತೆ ಸೇರಿದರು. ಮತ್ತೆ ಮಾತು ಮಾತು ಮಾತು... ಚನ್ನಾಗಿ ಎಂಜಾಯ್ ಮಾಡಿದ್ವಿ. ಮನೆಗೆ ಹೋಗಿ ಮಲಗುವಾಗ 11 ಗಂಟೆ ದಾಟಿತ್ತು. 

ಭಾನುವಾರ ಬೆಳಗ್ಗೆ ಅಂದ್ರೆ 27 ಗೆ ಸಿಗಂದೂರಿಗೆ ಹೋಗೋದು ಅಂತ ಮೊದಲೇ ತೀರ್ಮಾನ ಮಾಡಿದ್ವಿ. ಅದೇ ಕಾರಿನಲ್ಲಿ  ನಾವಿಷ್ಟು ಜನ ಹುಡುಗರು ಹಾಗು ಅಮ್ಮ, ಅಕ್ಕ ಹೊರಟ್ವಿ. ಹೊಳೆಬಾಗಿಲು ತಲುಪಿದಾಗ ತುಂಬಾ ರಶ್ ಇತ್ತು. ತಿಂಡಿ ಮುಗಿಸಿ ಇನ್ನೊಂದು  ಲಾಂಚ್  ಬರುವವರೆಗೆ ಕಾದು ಸಿಗಂದೂರಿಗೆ ತಲುಪಿದ್ವಿ. ತಾಯಿ ಚೌಡೇಶ್ವರಿ ದರ್ಶನ ಮುಗಿಸಿ ಮತ್ತೆ ಲಾಂಚ್ ನಲ್ಲಿ ಹೊಳೆಬಾಗಿಲು ಬಂದು ನಾವು ತಂದಿರುವ ಬುತ್ತಿ  ತಿಂದು ಸಾಗರ ಕಡೆಗೆ ನಮ್ಮ ಪಯಣ ಮುಂದುವರೆಸಿದ್ವಿ. ಸಾಗರಕ್ಕೆ ಬರುವಾಗ 3 ಗಂಟೆ ಆಯ್ತು. ಮನೆಗೆ ಬಂದು ಕ್ರಿಕೆಟ್ ಮ್ಯಾಚ್ ನೋಡ್ತಾ ಕಾಲ ಕಳೆದ್ವಿ. ರಾತ್ರಿ ಊಟ ಮುಗಿಸಿ ಒಳ್ಳೆ ಟ್ರಿಪ್ ನ ಮಜಾ ಹಾಗು ನಾಳೆಯಿಂದ ಬೆಂದಕಾಳೂರಿನಲ್ಲಿನ ಆಫೀಸ್ ಕೆಲಸ ನೆನೆಯುತ್ತ  ಮೊದಲೇ ಕಾಯ್ದಿರಿಸಿದ್ದ ಬೆಂಗಳೂರಿನ ಬಸ್ ಹತ್ತಿದ್ವಿ.

Thursday, January 20, 2011

ಮರೆತೇನೆಂದರೆ ಮರೆಯಲಿ ಹ್ಯಾಂಗಾ??

ಮರೆತೇನೆಂದರೆ ಮರೆಯಲಿ ಹ್ಯಾಂಗಾ??

ಜನವರಿ 21, ಇದು ನನ್ನ ಜೀವನದಲ್ಲಿ ಒಂದು ಮರೆಯಲಾರದ ದಿನ. ಎಲ್ಲೊ ಹುಟ್ಟಿ, ಎಲ್ಲೊ ಬೆಳೆದ ಒಬ್ಬಳು ಹುಡುಗಿ ನನ್ನನ್ನು 'ಅಣ್ಣ' ಅಂತ ಹೇಳಿಕೊಂಡು  ನನ್ನ ಜೀವನಕ್ಕೆ  ಕಾಲಿಟ್ಟಿದ್ದಳು. ಈ ದಿನ ಅವಳ ಜನ್ಮದಿನ. ನನಗೆ ಸ್ವಂತ ತಂಗಿ ಇಲ್ಲದೆ ಇರೋದಕ್ಕೆ ಇರಬೇಕು, ಅಣ್ಣ ಅಂತ ಯಾರು ಕರೀತಾರೋ ಅವರು ತುಂಬಾ ಆತ್ಮೀಯರೆನಿಸಿಕೊಳ್ಳುತ್ತಾರೆ. ಅಥವಾ ಅದು ನನ್ನ ದುರ್ಬಲತೆ ಇದ್ದರೂ ಇರಬಹುದು. ಇರುವುದೆಲ್ಲ ಬಿಟ್ಟು ಇರದುದರೆಡೆ  ತುಡಿಯುವುದೇ ಜೀವನ ಅನ್ನೋ ಹಾಗೆ...!!

ಒಂದು ದಿನ ಆರ್ಕುಟ್ನಲ್ಲಿ ಯಾರ ಜೊತೆಗೋ ಚಾಟ್ ಮಾಡುತ್ತಿದ್ದಾಗ 'Hi viniyanna...'   ಅಂತ ಒಂದು scrap ಬಂದು ನನ್ನ ಆರ್ಕುಟ್ಟಿನಲ್ಲಿ ಕುಳಿತಿತ್ತು. (ನನ್ನ ಹಳೆ ಡೈರಿ ತೆಗೆದು ನೋಡಿದ್ರೆ ಆ ದಿನಾಂಕ ಗೊತ್ತಾಗತ್ತೆ. ಆದರೆ ಇಲ್ಲಿ ಅದರ ಅವಶ್ಯಕತೆ ಇಲ್ಲ ಬಿಡಿ.)   ಹೆಸರು  ಮಂಗಳೂರು  ನಕ್ಷತ್ರ  ಅಂತ ಇತ್ತು. ಯಾರಪ್ಪ ಇದು ಅಂತ ತಲೆ ಕೆಡಿಸಿಕೊಂಡು ನೋಡಿದಾಗ, ನಾನು ಚಾಟ್ ಮಾಡಿ ಹೆಸರು ಕೇಳಿದಾಗ, ನಾನು 'ರೋಹಿಣಿ' ಅಂತ ಹೇಳಿ, ಅವಳ ಪರಿಚಯ ಹೇಳಿದ್ಲು.  ಇನ್ನೊಂದು 2-3 ಜನ ನನ್ನ ಫ್ರೆಂಡ್ಸ್ ಅವಳಿಗೂ ಆರ್ಕುಟ್ ಫ್ರೆಂಡ್ಸ್ ಆಗಿದ್ರು. ಮೊದಲ ಬಾರಿಗೆ ಅವಳು ನನ್ನನ್ನು ಅಣ್ಣ ಅಂತ ಕರೆದಿರೋದು  ಅವಳ safety ಗೆ  ಆಗಿರಲೂಬಹುದು. ಮೊದಲು ನಾನು ಕೂಡಾ ಹಾಗೆ ಅಂದುಕೊಂಡಿದ್ದೆ. ಆದರೆ ಅವಳ ಆ ಒಂದು ಅಣ್ಣ ಅನ್ನೋ ಮಾತು ಇಷ್ಟೆಲ್ಲಾ ಗಟ್ಟಿ ಆಗಿ ಉಳಿಯತ್ತೆ ಅಂತ ನಾವಿಬ್ರು ಊಹಿಸಿರಲಿಲ್ಲ ಅನ್ಸತ್ತೆ.

ಕೆಲವು ದಿನ ನಮ್ಮ ಉಭಯಕುಶಲೋಪರಿ ಚಾಟ್ ನಲ್ಲೆ ಆಯ್ತು. ಆಮೇಲೆ ಅವಳು ನನ್ನ ಫೋನ್ ನಂಬರ್ ತಗೊಂಡು ಕಾಲ್ ಮಾಡಿ ಮಾತಾಡೋಕೆ ಸ್ಟಾರ್ಟ್ ಮಾಡಿದ್ಲು. ರೋಹಿಣಿಯ ಅಮ್ಮ, ತಮ್ಮ ಜೊತೆ ಕೂಡ  ನಾನು ಮಾತಾಡ್ತಾ ಇದ್ದೆ ಅವರ ಮನೆ ಸದಸ್ಯನೇ ಆಗಿ ಹೋದೆ. ರೋಹಿಣಿ ಗೆ  ಅಪ್ಪ ಇರಲಿಲ್ಲ. ಜೀವನದಲ್ಲಿ ತುಂಬಾ ಕಷ್ಟಪಟ್ಟ  ಹುಡುಗಿ. ನಾನು ರೋಹಿಣಿಯನ್ನು ಪ್ರೀತಿಯಿಂದ 'ಕಂದಾ' ಅಥವಾ 'ಕಂದಮ್ಮ' ಅಂತ ಕರೀತಿದ್ದೆ. ಅವಳಿಗೂ ತುಂಬಾ ಇಷ್ಟ ಆಗ್ತಿತ್ತು ನಾನು ಹಾಗೆ ಕರಿಯೋದು.  ಎಲ್ಲಾ ವಿಷಯಾನು ಯಾವುದೇ ಮುಚ್ಚು ಮರೆ ಇಲ್ಲದೆ ಮಾತಾಡಿ ಕೊಳ್ಳುತ್ತಾ ಇದ್ದೆವು. ರೋಹಿಣಿ ಕೂಡ ನಮ್ಮನೆಗೆ ಫೋನ್ ಮಾಡಿ, ನನ್ನ ಅಮ್ಮ, ತಮ್ಮ, ಅಪ್ಪ ಜೊತೆ ಮಾತಾಡ್ತಾ ಇದ್ಲು, ನನ್ನ ಅಮ್ಮನಿಗೂ ಮಗಳು ಸಿಕ್ಕಷ್ಟೇ ಖುಷಿ  ಆಗಿತ್ತು. ಅವಳ ವ್ಯಕ್ತಿತ್ವವೇ ಅಂತದ್ದು. ಒಂದು ದಿನ ಮನೆಗೆ ಪೇಪರ್ ಬೇಕಾದ್ರೂ ಮಿಸ್ ಆಗ್ತಿತ್ತು , ಆದರೆ ನನ್ನ ತಂಗಿ ರೋಹಿಣಿ ಫೋನ್ ಕಾಲ್ ಮಾತ್ರ ಮಿಸ್  ಆಗ್ತಾನೇ ಇರಲಿಲ್ಲ. ದಿನಾಲು ನಂಗೆ ಕಾಲ್ ಮಾಡ್ತಿದ್ಲು.  ಅವಳು ನನ್ನನ್ನ ಫೋಟೋದಲ್ಲಿ ನೋಡಿದ್ಲು, ನಾನು ಕೂಡ ಅಷ್ಟೇ.(ಆರ್ಕುಟ್ಟಿನಲ್ಲಿ). ನಾನು ಆಗ ಕೂದಲನ್ನು ಉದ್ದ ಬಿಟ್ಟಿದ್ದೆ, ಅದಕ್ಕೆ ಅವಳು ನನ್ನನ್ನು 'ಜುಟ್ಟು ಮಾವ' ಅಂತಾನು ಕರಿತಾ ಇದ್ಲು. ಎಷ್ಟೇ ನೋವಿದ್ದರೂ ಕೂಡ ನಗ್ತಾ, ನಗ್ತಾ ಮಾತಾಡ್ತಾ ಇದ್ಲು. ಹಾಗೆ ಕಥೆ, ಕವನ ಅಂತೆಲ್ಲ ಚೆನ್ನಾಗಿ ಬರೀತಾ ಇದ್ಲು. ನನಗೆ ತುಳು ಭಾಷೆ ಹೇಳಿ ಕೊಡ್ತಾ ಇದ್ಲು. ನನ್ನ ಹವ್ಯಕ ಭಾಷೆ ಅವಳಿಗೆ ಇಷ್ಟ. ಹಾಗೆ ಮಾತಾಡೋಕೆ ಪ್ರಯತ್ನ ಪಡ್ತಿದ್ಲು. ನಾನು ನನ್ನ ಮನೆಗೆ ಫೋನ್ ಮಾಡಿದಾಗ conference call ಹಾಕಿ ನಮ್ಮ ಹವ್ಯಕ ಭಾಷೆ ಅವಳಿಗೆ ಕೇಳಿಸ್ತಾ ಇದ್ದೆ.  ಒಮ್ಮೆ ನಾವು ಮೀಟ್ ಆಗೋಣ ಅಣ್ಣ ಮಂಗಳೂರಿಗೆ ಬನ್ನಿ  ಅಂತ ಹೇಳ್ತಾನೆ ಇದ್ಲು. ಕೆಲಸದ ನಡುವೆ ಬಿಡುವು ಮಾಡಿಕೊಂಡು ಹೋಗೋಕೆ ಆಗ್ತಾ ಇರಲಿಲ್ಲ.  ಇನ್ನು ಹೀಗೆ ಇದ್ರೆ ಆಗಲ್ಲ ಅಂತ ಒಂದು ಶುಕ್ರವಾರ ರಾತ್ರಿ  ಮಂಗಳೂರಿನ ಬಸ್ ಹತ್ತಿ ನನ್ನ ತಂಗಿ ನೋಡೋಕೆ ಹೊರಟೇ ಬಿಟ್ಟೆ.

ಮಂಗಳೂರಿನಲ್ಲಿ ನಾವು ಭೇಟಿ ಆದ್ವಿ. ತಿಂಡಿ, ಕಾಫಿ ಆಯ್ತು. ತುಂಬಾ ಮಾತಾಡಿದ್ವಿ. ಅವಳ ಅಮ್ಮ ಯಾರದ್ದೋ ನೆಂಟರ ಮನೆಗೆ ಹೋಗಿದ್ರಿಂದ ಅವರನ್ನ ಭೇಟಿ ಆಗೋಕೆ ಆಗಿಲ್ಲ.ನಾವು ಭೇಟಿ ಆದಾಗ ನಂಗೆ ಒಂದು gift ಕೊಟ್ಟಿದ್ಲು. ತುಂಬಾ ಚನ್ನಾಗಿದೆ ಅದು. ಪ್ರತೀ ವರ್ಷ ರಾಖಿ ಕಳಿಸ್ತಾ ಇದ್ಲು. ನಾನು ಯಾವುದನ್ನು ತುಂಬಾ ದಿನದಿಂದ ಹಂಬಲಿಸ್ತ ಇದ್ನೋ ಅದು ನಂಗೆ ಸಿಕ್ಕಿತ್ತು. ತಂಗಿ ಪ್ರೀತಿ ಅಂದ್ರೆ ಏನು ಅನ್ನೋದನ್ನು ಅವಳು ನನಗೆ ತಿಳಿಸಿದ್ಲು.

ಅವಳಿಗೆ ಮದುವೆ ಗೊತ್ತಾಯ್ತು. ನನಗೆ ಮದುವೆಗೆ ಹೋಗೋಕೆ ಆಗಿಲ್ಲ. ಅವಳ ಅಮ್ಮ, ಅವಳು, ತಮ್ಮ ಎಲ್ಲರೂ ನನಗೆ ಒಂದು ರೌಂಡ್ ಬೈದು ಕೂಡ ಆಯ್ತು. ಅವಳು ಮದುವೆ ಆದ ನಂತರ  ಮೊಬೈಲ್ ಮನೆನಲ್ಲೇ ಬಿಟ್ಟು (ತಮ್ಮನಿಗೆ ಕೊಟ್ಟು) ಗಂಡನ ಮನೆಗೆ ಹೋದಳು. ಆ ನಂತರ ಅವಳು ತೌರು ಮನೆಗೆ ಬಂದಾಗ ಮಾತ್ರ ಕಾಲ್ ಮಾಡ್ತಿದ್ಲು. ಆಗ ಅವಳ ಗಂಡನ ಜೊತೆ ಕೂಡ ಮಾತಾಡ್ತಾ ಇದ್ದೆ. ಅವಳ ತಮ್ಮ  (ಕೀರ್ತನ್) ದಿನಾಲು ಮೊಬೈಲ್ ನಿಂದ ಮೆಸೇಜ್ ಮಾಡ್ತಾ ಇದ್ದ. ರೋಹಿಣಿ ಮನೆಯಲ್ಲೇ ಇರೋದ್ರಿಂದ (house wife) ಆರ್ಕುಟ್, ಜಿ ಮೇಲ್ ಯಾವುದರಲ್ಲೂ ಸಿಕ್ತ ಇರಲಿಲ್ಲ. ಗಂಡನ ಮನೆ, ಅತ್ತೆ, ನಾದಿನಿಯರು, ಮೈದುನರು ಇವರೆಲ್ಲ ಈಗ ಅವಳ ಸಂಸಾರದಲ್ಲಿದಾರೆ. ನಾನು ಕೂಡ ಅದಕ್ಕೆ ಹೊಂದಿಕೊಂಡೆ. ಆದರೆ ನಾನು ಮಾತ್ರ ಅಮ್ಮ ಹಾಗು ತಮ್ಮನಿಗೆ ಆಗಾಗ ಕಾಲ್ ಮಾಡಿ ಮಾತಾಡ್ತಿದ್ದೆ. ರೋಹಿಣಿ ಬಗ್ಗೆ ಕೇಳ್ತಾ ಇದ್ದೆ. ಹೀಗಿದ್ದಾಗ ಒಮ್ಮೆ ಅವಳ ಮೊಬೈಲಿಗೆ ಕಾಲ್ ಮಾಡಿದರೆ, 'ನೀವು ಕರೆ ಮಾಡಿರುವ ಚಂದಾದಾರರು ಸ್ವಿಚ್ ಆಫ್ ಮಾಡಿದ್ದಾರೆ' ಅಂತ ಬಂತು. ಏನೋ ತೊಂದರೆ ಆಗಿ ಸ್ವಿಚ್ ಆಫ್ ಆಗಿರಬಹುದು ಅಂತ ನಾನು ಅನ್ಕೊಂಡೆ. ಒಂದು ವಾರದ ನಂತರ ಕರೆ ಮಾಡಿದರೂ ಕೂಡ ಅದೇ ಉತ್ತರ. ಆನಂತರ ರೋಹಿಣಿಯಿಂದ, ಕೀರ್ತನ್ ನಿಂದ, ಅಮ್ಮನಿಂದ ಆಗ್ಲಿ ಒಂದೇ ಒಂದು ಫೋನ್ ಎಲ್ಲಾ, ಮೆಸೇಜ್ ಇಲ್ಲ. ಒಟ್ಟಿನಲ್ಲಿ ಪೂರ್ತಿ ಬಿಟ್ಟೆ ಹೋಯಿತು. ಆಗ ಕೂಡ ನನಗೆ ನಾನೇ ಸಮಾಧಾನ ಹೇಳಿಕೊಂಡೆ, ಯಾವದೋ ತುರ್ತು ಸಂಧರ್ಭದಲ್ಲಿ ನಂಬರ್ ಬದಲಾವಣೆ ಮಾಡಿರಬೇಕು, ರೋಹಿಣಿ ಕಾಲ್ ಮಾಡೇ ಮಾಡ್ತಾಳೆ. ಒಂದೊಮ್ಮೆ ಕಾಲ್ ಮಾದಡಿದ್ರು ಪರವಾಗಿಲ್ಲ, ಬರುವ ರಾಖಿ ಹಬ್ಬಕ್ಕೆ ರಾಖಿ ಕಳುಹಿಸಿಯೇ ಕಳುಹಿಸುತ್ತಾಳೆ ಅದರ ಜೊತೆ ಅವಳ ವಿಳಾಸ, ಫೋನ್ ನಂಬರ್ ಎಲ್ಲದನ್ನು  ಕೊಟ್ಟು ಕಾಗದ ಬರೀತಾಳೆ ಅನ್ಕೊಂಡೆ. ರಾಖಿ ಹಬ್ಬ ಆಗಿ ಒಂದು ತಿಂಗಳಾದರೂ ಅವಳ ರಾಖಿಗೆ ಕಾಯ್ತಾ ಇದ್ದೆ. ದಿನಾಲು ಕೊರಿಯರ್ ಹಾಗು ಲೆಟರ್ ನಲ್ಲಿ ಅವಳದ್ದೆನಾದರು ಪತ್ರ ಇರಬಹುದೆಂಬ ನಿರೀಕ್ಷೆ ಇರ್ತಾ ಇತ್ತು.  ಆದರೆ ನನ್ನ ನಿರೀಕ್ಷೆ ಸುಳ್ಳಾಗಿತ್ತು. ಆದರೆ ನನ್ನ ಅಡ್ರಸ್ಸ್ ಮತ್ತು ಫೋನ್ ನಂಬರ್ ಮಾತ್ರ ಬದಲಾಗಿರಲಿಲ್ಲ. ಹೋದರೆ ಹೋಗಲಿ ಹೇಗೂ ಸೆಪ್ಟೆಂಬರ್ ನಲ್ಲಿ ನನ್ನ ಹುಟ್ಟು ಹಬ್ಬಕ್ಕಾದ್ರು ವಿಶ್ ಮಾಡೋಕೆ ಫೋನ್ ಮಾಡ್ತಾಳೆ ಅಂತ ಕಾಯ್ತಾನೆ ಇದ್ದೆ. ಅದು ಕೂಡ ಹುಸಿ ಆಯ್ತು. ಯಾರ್ಯಾರದೋ ಮುಖಾಂತರ ಅವಳಿಗೆ ಒಂದು ಮಗು ಆಗಿದೆ ಅಂತ ಗೊತ್ತಾಯಿತು. ಆದರೆ ಅವಳ ಈಗಿನ ವಿಳಾಸ ಪತ್ತೆ ಮಾಡೋದ್ರಲ್ಲಿ ನಾನು ಸೋತೆ.  ಅವಳ ಹಳೆಯ  ಮನೆಯ ವಿಳಾಸ ಹುಡುಕಿ ಕೊಂಡು ಹೋಗೋ ಅಷ್ಟು ನನಗೆ ಗೊತ್ತಿಲ್ಲ.


ನನಗೆ ಈ ತಂಗಿ ಪ್ರೀತಿ ಅನ್ನೋದು ಜೀವನ ಪೂರ್ತಿ ಸಿಗೋ ಅಷ್ಟು ಅದೃಷ್ಟ ಮಾಡಿಲ್ಲ ಅನ್ಸತ್ತೆ. ಅದಕ್ಕೆ ಈ ನಡುವೆ ಯಾರಾದರು ವಿನಿಯಣ್ಣ ಅಂತ ಮತಾಡ್ಸಿದ್ರೆ ಎಷ್ಟು ಖುಷಿ  ಆಗತ್ತೋ, ಅಷ್ಟೇ ಸಿಟ್ಟು, ಬೇಸರ ಕೂಡ ಆಗತ್ತೆ. ಅಣ್ಣ ಅಂತ ಹೇಳಿದ್ಮೇಲೆ ಅದನ್ನ ಅವರ ಜೀವನ ಪೂರ್ತಿ
ಉಳಿಸ್ಕೊಂಡು ಹೋಗ್ಬೇಕು ಅನ್ನೋದು ನನ್ನ ಸಲಹೆ. ಈಗ ಯಾರಾದ್ರೂ ಅಣ್ಣ ಅಂತ ಮಾತನಾಡ್ಸಿದ್ರೆ, ಹಾಗೆ ಕರಿಬೇಡಿ, ಫ್ರೆಂಡ್ಸ್ ಆಗೇ ಇರೋಣ ಅಂತ ಹೇಳ್ತೀನಿ. ಇದೆಲ್ಲದರ ನಡುವೆ ಕೆಲವು ದಿನದ ಹಿಂದೆ ನಮ್ಮ ಹವ್ಯಕ ಹುಡುಗಿ ಒಬ್ಬಳು ನಾನು ಹಾಕಿರೋ ಫೋಟೋ ಕಾಮೆಂಟ್ಸ್ ಗೆ 'Tanx vinayanna...'  ಅಂತ ಹೇಳಿ, ತಂಗಿ ಆಗಿದಾಳೆ. ಮತ್ತೆ ನನಗೆ ತಂಗಿ ಇದಾಳೆ ಅನ್ನೋ ಉತ್ಸಾಹ ತುಂಬಿದಾಳೆ. (*ಕರಾವಳಿ ಹುಡುಗಿ, ಇವಳು ಕೂಡ ಚೆನ್ನಾಗಿ ಕವನ, ಬ್ಲಾಗ್ ಬರೀತಾಳೆ. ಒಳ್ಳೆ ಫೋಟೋಗ್ರಫಿ ಕೂಡ ಮಾಡ್ತಾಳೆ. ಇಂಜಿನಿಯರಿಂಗ್ ಓದಿ, M.A. ಮಾಡ್ತಿದಾಳೆ.  ಅವಳ ಹೆಸರು....... ಅವಳನ್ನು ಕೇಳಿ ನಂತರ ಹೆಸರು ಹಾಕು ಅಂದ್ರೆ ಮಾತ್ರ ಇಲ್ಲಿ  ಹಾಕ್ತೀನಿ.) ಅದು ನಂಗೆ ಸಂತೋಷದ ವಿಷಯ. ಆದರೆ ಅವಳು ಅದನ್ನ ಹೇಗೆ ಉಳಿಸ್ಕೊತಾಳೆ  ಅನ್ನೋದನ್ನು ಕಾದು ನೋಡಬೇಕು. ಮತ್ತೊಮ್ಮೆ ಈ ಅಣ್ಣ, ತಂಗಿ ಬಂಧದಿಂದ ನೋವಾಗತ್ತೋ ಅಥವಾ ನಿಜವಾಗಿ ತಂಗಿ ಪ್ರೀತಿ ಕೊಟ್ಟು ನಲಿವು ತರ್ತಾಳೋ ಕಾದು ನೋಡ್ಬೇಕು. ಆದರೆ ನಮ್ಮಿಬ್ಬರ ನಡುವೆ ಅಷ್ಟೇನೂ ಹೇಳಿ ಕೊಳ್ಳುವಂತಹ communication ಇಲ್ಲ. ಆದರೂ ಇವಳು ಕೂಡ ನನಗೆ one of the favorite sister.  

ಅದೇನೇ ಇರಲಿ, ನನ್ನ ಕಂದಮ್ಮನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು. ಎಲ್ಲೇ ಇದ್ರು ಚೆನ್ನಾಗಿರಲಿ ಅಂತ ಆ ಕಾಣದ ದೇವರಲ್ಲಿ ಪ್ರಾರ್ಥಿಸಿಕೊಳ್ತೀನಿ.  ಈಗ ಮತ್ತೆ ಉದ್ದಕ್ಕೆ ಕೂದಲು ಬಿಟ್ಟಿದೀನಿ ಕಂದಮ್ಮ. ಮತ್ತೆ ನೀನು  'ಜುಟ್ಟು ಮಾವ' ಅಂತ ಕರೆಯಬಹುದು.  ನನ್ನ ರೋಹಿಣಿ ಮತ್ತೆ ನನ್ನ ಜೀವನಕ್ಕೆ ಬರ್ತಾಳೆ ಅನ್ನೋ ಆಸೆಯಿಂದ ಕಾಯ್ತಾ ಇರ್ತೀನಿ..

*ಮೇಲೆ ಹೇಳಿದ ಕರಾವಳಿ ಹುಡುಗಿಯ  ಹೆಸರು ಸೌಮ್ಯ ಭಾಗವತ್ ಅಂತ..

Wednesday, January 5, 2011

ಹೊಸವರ್ಷದ ಪ್ರವಾಸ..

2011 ನೇ ಹೊಸವರ್ಷವನ್ನು ಸಕಲೇಶಪುರದಲ್ಲಿ ನಾವು ಮತ್ತು  ಬೇಲೂರಿನ ನಮ್ಮ ಹುಡುಗರು ಹಾಗು ಅಲ್ಲಿ ಮನೆ ಜನ ಒಟ್ಟಾಗಿ ಸೇರಿ ಸಂಜುನ  farm house ನಲ್ಲಿ  ಆಚರಿಸೋಣ ಅಂತ ಒಂದು ತಿಂಗಳು ಮುಂಚೇನೆ  ಅಕ್ಷರ ಮತ್ತು ಸಂಜು ಪ್ಲಾನ್ ಮಾಡಿದ್ರು. ನಾವೆಲ್ಲರೂ ಸರಿ ಅಂತ ಹೇಳಿದ್ವಿ. ಇಷ್ಟೆಲ್ಲಾ ಆದ್ಮೇಲೆ sudden ಆಗಿ ಸಂದೀಪಣ್ಣ (ಸಂಜು ಅಣ್ಣ) ಅತ್ತಿಗೆ, ಅವರ ಅತ್ತೆ, ಮಾವ, ಕಜ್ಹಿನ್ಸ್ ಎಲ್ಲರೂ ಅಕ್ಷರ ಮನೆಗೆ ಬಂದ್ರು. ಆಗ   new year plan ಬಗ್ಗೆ ಮಾತಾಡ್ತಾ ಅವರು, ನೀವೆಲ್ಲರೂ ನಮ್ಮ ಮನೆಗೆ ಬನ್ನಿ ಸಂಜುನ್ನ  ಕೂಡ ಅಲ್ಲಿಗೆ ಬರೋಕೆ ಹೇಳ್ತೀನಿ ನಮ್ಮೂರಲ್ಲೇ celebrate ಮಾಡೋಣ ಅಂತ ಒತ್ತಾಯ ಮಾಡಿದ್ರು. ಅತ್ತಿಗೆ, ಆಂಟಿ, ಅಂಕಲ್ ಎಲ್ಲರೂ ಅದನ್ನೇ ಹೇಳಿದ್ರು. ಹೋಗಿಲ್ಲ ಅಂದ್ರೆ ಅವರು ಬಿಡಲ್ಲ.  ಅಂತೂ ಈ  ಹೊಸ ವರ್ಷವನ್ನು ಕುಶಾಲ ನಗರ (ಮಡಿಕೇರಿ) ಹೋಗಿ ಸಂದೀಪಣ್ಣ ಅವರ family ಜೊತೆ ಆಚರಿಸೋದು ಅಂತ ತೀರ್ಮಾನ ಮಾಡಿ ಆಯ್ತು.

 ಅಮ್ಮ ಮತ್ತು ಅಕ್ಕ ಡಿಪ್ಪಿ ಅಣ್ಣ ಅವರ ಜೊತೆ new year celebration ಗೆ  ಅಂತ ಡಿಪ್ಪಿ ಹೆಂಡತಿ ಮನೆ ಕ್ಯಾಲಿಕಟ್ ಗೆ (ಕೇರಳ) ಹೋಗಿದ್ರು.  ಡಿಸೆಂಬರ್ 30 ರ ರಾತ್ರಿನೆ ನಾವೆಲ್ಲಾ ಅಕ್ಷರ ಮನೇಲಿ ಉಳಿದ್ವಿ. ಕಾರಣ ಬೆಳಗ್ಗೆ ಬೇಗ ಹೊರಡೋಣ ಅಂತ.  31 ರ ಬೆಳಗ್ಗೆ 7.30 ಗೆ  ನಾವು 4 ಜನ ಕೂಡ (ನಾನು, ಅಕ್ಷರ, P.T.(ರವಿ), ಪ್ರವೀಣ) ಆಫೀಸಿಗೆ ರಜೆ ಹಾಕಿ ಮಗೇಶನ ಕಾರಿನಲ್ಲಿ  ಹೊರಟ್ವಿ.  ಮಗೆಶನಿಗೆ ಆಫೀಸಿನಲ್ಲಿ ಜಾಸ್ತಿ ಕೆಲಸ ಇರೋದ್ರಿಂದ ರಜೆ ಸಿಕ್ಕಿಲ್ಲ. ಮೈಸೂರಿನ ಹತ್ತಿರ ಬೆಳಗ್ಗಿನ ಕಾಫಿ, ತಿಂಡಿ ಮುಗಿಸಿ ಮತ್ತೆ ನಮ್ಮ ಪಯಣ ಮುಂದು ವರೆಸಿದ್ದು. ಕುಶಾಲನಗರ ತಲುಪೋದು 1.30 ಆಯ್ತು. ಸಂದೀಪಣ್ಣ, ಅಂಕಲ್, ಆಂಟಿ ಅವರೆಲ್ಲ ನಾವು ಹೋಗೋದಕ್ಕೆ ಸರಿಯಾಗಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮನೆಗೆ ಬಂದ್ರು. ಅತ್ತಿಗೆ ಅವರೆಕಾಳಿನ ಸಾಂಬಾರ್ ತುಂಬಾ ಚೆನ್ನಾಗಿ ಮಾಡಿದ್ರು. ಒಳ್ಳೆ ಊಟ ಮಾಡಿ ರಾತ್ರಿ ಪಾರ್ಟಿಗೆ ರೆಡಿ ಮಾಡೋಕೆ ಅಡಿಗೆ ಭಟ್ರು ಹಾಗು ಪಾತ್ರೆ, ಗ್ಯಾಸ್, ಎಲ್ಲಾ ತಗೊಂಡು ತೋಟಕ್ಕೆ ಹೋದ್ವಿ. ಅಲ್ಲಿ ಸಂದೀಪಣ್ಣ ಫ್ಯಾಮಿಲಿ ಫ್ರೆಂಡ್  ಮನೆ ಇದೆ. ಅವರ ಮನೆ  Location  ಮಾತ್ರ ತುಂಬಾ, ಅಂದ್ರೆ ತುಂಬಾ ಚೆನ್ನಾಗಿತ್ತು. ಅಡಿಗೆಯವರು ಎಲ್ಲಾ ರೆಡಿ ಮಾಡೋವರೆಗೆ ನಾವು ಸ್ವಲ್ಪ ರೆಸ್ಟ್ ತಗೊಂಡ್ವಿ..

ಸಂಜೆ 7 ಗಂಟೆ ಸುಮಾರಿಗೆ ಫ್ರೆಂಡ್ಸ್, ಫ್ಯಾಮಿಲಿ ಜನ ಎಲ್ಲಾ ಬಂದು ಸೇರಿಕೊಂಡರು. 8.30 ಯಿಂದ fire camp ಶುರು ಮಾಡಿ, ಹಾಡು, ಡಾನ್ಸ್, ಕ್ವಿಜ್, ಜೋಕ್ಸ್, ಹೀಗೆ ತುಂಬಾ ಚೆನ್ನಾಗಿ  ಎಂಜಾಯ್ ಮಾಡಿ 12 ಗಂಟೆಗೆ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸ್ವಾಗತಿಸಿದ್ವಿ. ತೋಟದಿಂದ ಮನೆಗೆ ಬಂದು ಮತ್ತೆ  ಅದು , ಇದು  ಮಾತನಾಡಿ ಮಲಗೋದು  2.30 am ಆಯ್ತು .

ಜನವರಿ 1 ನೇ ತಾರೀಖು ಬೆಳಗ್ಗೆ  8 ಗಂಟೆಗೆ ಎದ್ದು ಸ್ನಾನ, ತಿಂಡಿ  ಅಂತೆಲ್ಲ ಮುಗಿಸಿ ಕುಶಾಲ ನಗರದಿಂದ 11 ಗಂಟೆಗೆ ಕ್ಯಾಲಿಕಟ್ (ಕೇರಳ) ದಾರಿ ಹಿಡಿದ್ವಿ. ರಸ್ತೆ ಅಷ್ಟೇನೂ ಚೆನ್ನಾಗಿಲ್ಲ. ಘಾಟಿಯಲ್ಲಿ ಒಳ್ಳೆ ಜಾಗ ಏನಾದ್ರು ಸಿಕ್ಕಿದ್ರೆ ಫೋಟೋ ಗೆ, ಊಟಕ್ಕೆ, ಅಂತ ಸಿಕ್ಕಿದ ಕಡೆಗೆಲ್ಲ ಕಾರ್ ನಿಲ್ಲಿಸಿ, ಮಾಹೆ, ಪಾಂಡಿಚೆರಿ ಮಾರ್ಗವಾಗಿ ಸಂಜೆ 6 ಗಂಟೆಗೆ ಕ್ಯಾಲಿಕಟ್ ನಲ್ಲಿರೋ ಡಿಪ್ಪಿ ಅಣ್ಣನ ಮಾವನ ಮನೆಗೆ ತಲುಪಿದ್ವಿ. ಅಲ್ಲಿ ಅಮ್ಮ, ಅಕ್ಕ, ಅತ್ತಿಗೆ, ಬೇಲೂರಿನ ಆಂಟಿ-ಅಂಕಲ್, ಎಲ್ಲರೂ ಬಂದಿದ್ರು. ಅಲ್ಲಿ ಮತ್ತೆ ಮಾತು, ಜೋಕ್ಸ್, ನಗು, ರೇಗಿಸೋದು ಅಂತ ಮಾಡ್ಕೊತ ಮಲಗೋದು 1.30 am ಆಗೇ ಹೋಯ್ತು.

ಮಾರನೆ ದಿನ ಅಂದ್ರೆ ಜನವರಿ 2 ರ ಬೆಳಗ್ಗೆ fresh ಆಗಿ, ತಿಂಡಿ ತಿಂದು ಕ್ಯಾಲಿಕಟ್ ನಿಂದ ಹೊರಟ್ವಿ. ಕೇರಳದ ಬಾಳೆಕಾಯಿ  ಚಿಪ್ಸ್ ತಗೊಂಡ್ವಿ.  ವಯನಾಡು, ಬಂಡೀಪುರ, ಮೈಸೂರ್  ಮಾರ್ಗವಾಗಿ ಬೆಂಗಳೂರು ಬರೋದು ಅಂತ ಆಯ್ತು. 380 ಕಿಲೋಮೀಟರು ಆಗತ್ತೆ. ಮತ್ತೆ ಮಧ್ಯ, ಮಧ್ಯ ನಿಲ್ಲಿಸ್ಕೋತ, ಫೋಟೋಸ್ ತಗೋತ ಬರ್ತಾ ಇದ್ವಿ. ಇನ್ನೇನು ಕೇರಳ ಗಡಿ ಮುಗಿಯೋದು 50 km ಇದೆ ಅನ್ನೋವಾಗ ಕೇರಳ ಹೈ ವೇ ಪೊಲೀಸರು ನಮ್ಮ ಕಾರ್ ನಿಲ್ಲಿಸಿದರು. Documents ಎಲ್ಲದನ್ನು  ತೋರಿಸಿದ್ವಿ. ನಮ್ಮ ಗ್ರಹಚಾರಕ್ಕೆ, ಇನ್ಸೂರೆನ್ಸ್ ಅವಧಿ ಮುಗಿದೇ ಹೋಗಿತ್ತು. ಹಾಗು ಕಾರಿನ original records ಮನೇಲೆ ಬಿಟ್ಟು  ಹೋಗಿದ್ವಿ.  ಅಲ್ಲಿನ ಪೊಲೀಸರಿಗೆ ಮಲೆಯಾಳಿ ಬಿಟ್ಟರೆ ಬೇರೆ ಭಾಷೆ ಬರ್ತಾ ಇರಲಿಲ್ಲ. ನಾವೆಲ್ಲಾ 2000 ರೂಪಾಯಿ ಹೋಯ್ತು ಅನ್ಕೊತಾ ಇದ್ವಿ. ಅವರನ್ನ ಒಪ್ಪಿಸೋ ಹೊತ್ತಿಗೆ ಅಕ್ಷರ ಮತ್ತು ಪ್ರವೀಣ್ ಗೆ ಸಾಕಾಗಿ ಹೋಯ್ತು. ಇನ್ನೊಂದು ವಿಶೇಷ ಅಂದ್ರೆ ಇಷ್ಟೆಲ್ಲಾ ನಮ್ಮದೇ ತಪ್ಪು ಇದ್ರು ಕೂಡ ಬರಿ Rs. 300/- ಫೈನ್ ಅಂತ ತಗೊಂಡು ರಸೀಧಿ ಕೊಟ್ರು. ಅದೇ ಖುಷಿ ನಮಗೆ. ಅಲ್ಲಿಂದ ಕರ್ನಾಟಕ ಬಾರ್ಡರ್ ಒಳಗೆ ಬಂದು, ಬಂಡೀಪುರದಲ್ಲಿ ರಸ್ತೆನಲ್ಲಿ ತುಂಬಾ ದೂರ ಬಾರೋ ವರೆಗೆ ಎಲ್ಲೂ ಕಾರ್ ನಿಲ್ಲಿಸಲೇ ಇಲ್ಲ.  ಬಂಡೀಪುರ ಕಾಡಿನಲ್ಲಿ ರಸ್ತೆ ಅಂಚಿನಲ್ಲೇ ಆನೆಗಳು ಕಾಣಿಸಿದವು. ಆದರೆ ಫೋಟೋಗೆ ಸಿಗಲೇ ಇಲ್ಲ.

ಮಧ್ಯಾಹ್ನ ಊಟಕ್ಕೆ ಗುಂಡ್ಲುಪೇಟೆ ಗಿಂತ ಮುಂಚೆ ಊಟಕ್ಕೆ ನಿಂತ್ವಿ. ಹೊರಗಡೆಯಿಂದ ನೋಡಿದ್ರೆ ತುಂಬಾ ಲಕ್ಷುರಿ ಅನ್ನಿಸೋ ಹೋಟೆಲ್. ಒಳಗೆ ಹೋದರೆ ನಾವು ಕೇಳಿದ್ದು ಏನು ಇರಲಿಲ್ಲ. ಹೋಟೆಲ್ನಲ್ಲಿ ಇರೋದ್ನ ಹೋಟೆಲಿನ ಮಾಣಿ  ತಂದು ಕೊಟ್ಟ ನಾವು ತಿಂದ್ಕೊಂಡು ಸುಮ್ನೆ ಎದ್ದು ಬಂದ್ವಿ. ರಾತ್ರಿ ಮೈಸೂರ್, ಬೆಂಗಳೂರು ರಸ್ತೆ ತುಂಬಾ ಟ್ರಾಫಿಕ್ ಇತ್ತು. 8 ಗಂಟೆ ಹೊತ್ತಿಗೆ ಮಂಡ್ಯದಲ್ಲಿ ಒಂದು ಧಾಬದಲ್ಲಿ ಒಳ್ಳೆ ಊಟ ಮಾಡಿ, ಬೆಂಗಳೂರು ಮುಟ್ಟಿದ್ದು ರಾತ್ರಿ 10.30 ಆಯ್ತು. ಹೊಸವರ್ಷ ಒಳ್ಳೆ ರೀತಿನಲ್ಲಿ ಶುರು ಆಗಿದೆ. ಮುಂದೆ ಹೇಗೆ ಅಂತ ನೋಡ್ಬೇಕು.


Thursday, December 16, 2010

ತಿರುಪತಿ ಪ್ರವಾಸ...

Last week ನಲ್ಲಿ ನಾವು 12 ಜನ friends ವೆಲ್ಲೂರು ಮತ್ತು ತಿರುಪತಿ ಟ್ರಿಪ್ ಹೋಗಿದ್ವಿ. ನಮ್ಮದೇ ಆದ ಬ್ಯಾಚ್ ನಿಂದ 7 ಹಾಗು ಬೇರೆ 5 ಜನ ಹೋಗಿದ್ವಿ.[( 7- Ashwin, Me, Jisha, Manasa, Chandrika, Jyothi, Vikram) ( 5-Teju, Kokila, Manoj, Shashi, Shyam)] ನಾನಂತೂ ಎಷ್ಟೋ ವರ್ಷದ ನಂತರ ಹೀಗೆ ಫ್ರೆಂಡ್ಸ್ ಜೊತೆ ರೈಲಿನಲ್ಲಿ ಟ್ರಿಪ್ ಹೊರಟಿರೋದು. ಯಾವಾಗ್ಲೂ ನಾನು ಕಾರಿನಲ್ಲಿ ಅಥವಾ ಬೇರೆ ವೆಹಿಕಲ್ ಅಥವಾ ಬೈಕಿನಲ್ಲಿ ಊರು ಸುತ್ತೋಕೆ ಹೋಗೋದು ವಾಡಿಕೆ. ಆದರೆ ಈ ಬಾರಿ ನಾನು ರೈಲಿನಲ್ಲಿ ಹೋಗಿದ್ದು ವಿಶೇಷ. ಹಾಗಂತ ಇವರು ಯಾರೂ ನನ್ನ ಚೆಡ್ಡಿ ದೋಸ್ತ್ ಗಳಲ್ಲ. ಕೆಲವೇ ತಿಂಗಳುಗಳ ಹಿಂದೆ ಆದ ಪರಿಚಯ, ಗಾಢವಾಗಿ ಬೆಳೆದ ಸ್ನೇಹ,  10 ಜನರ ನಮ್ಮದೇ ಆದ ಒಂದು ಟೀಂ. ನಮ್ಮ ಟೀಂ ನಲ್ಲಿ 3 ಜನ ಕಾರಣಾಂತರಗಳಿಂದ ಈ ಟ್ರಿಪ್ ಗೆ ಬಂದಿಲ್ಲ. ನಾವು ತುಂಬಾ ಮಿಸ್ ಮಾಡ್ಕೊಂದ್ವಿ. ಹಾಗೆ ಅಲ್ಲಿನ ಫೋಟೋಸ್ ಹಾಗು ನಮ್ಮ  enjoyment ಕಥೆ ಕೇಳಿ  ಅವರೇ ತುಂಬಾ ಬೇಜಾರ್ ಮಾಡಿಕೊಂಡರು.

ಹೊರಡುವ ದಿನ (ಶನಿವಾರ) ಬೆಳಗಿನ ಜಾವ 4 ಗಂಟೆಗೆ ಎದ್ದು ಎಲ್ಲರಿಗೂ ಫೋನಾಯಿಸಿ ಎಲ್ಲರೂ ಎದ್ದಿದ್ದಾರೆ ಅಂತ ಖಚಿತ ಆದ್ಮೇಲೆ ನಾನು ಎದ್ದು ಸ್ನಾನ ಮಾಡಿ, ರೆಡಿ ಆಗಿ ರೈಲ್ವೆ ಸ್ಟೇಷನ್ ತಲುಪಿದ್ದು 5.30. ಒಬ್ಬೊಬ್ಬರಾಗಿ ಎಲ್ಲರೂ ಬಂದು ಸೇರಿದ್ದು 6 ಗಂಟೆ ಆಯ್ತು. ಚುಮು, ಚುಮು ಚಳಿ. 6.30 ಲಾಲ್ ಬಾಗ್ express ಗೆ ರಿಸರ್ವ್ ಮಾಡ್ಸಿದ್ವಿ. ಟ್ರೈನ್ ಹೊರಟು ಸ್ವಲ್ಪ ಸಮಯಕ್ಕೆ ಹಸಿವು ಅಂತ ಬ್ರೆಡ್ ಮತ್ತು ಜಾಮ್ ಹೊಟ್ಟೆಗೆ ಇಳ್ಸಿದ್ವಿ. ಮಾತು, ಮಾತು, ಮಾತು... ಒಬ್ಬಬ್ಬೊರನ್ನು ರೆಗಿಸ್ಕೋತ ಅಂತ್ಯಾಕ್ಷರಿ ಆಡ್ಕೋತ ಸಮಯ ಹೋಗಿದ್ದೆ ಗೊತ್ತಾಗಿಲ್ಲ. ಅಷ್ಟರಲ್ಲಿ ನಾವು  ಇಳಿಯೋ ಸ್ಟೇಷನ್ ಬಂದಾಗಿತ್ತು. (ಕಾಟಪಾಡಿ)  ಇಲ್ಲಿಂದ ವೆಲ್ಲೊರು ಗೋಲ್ಡನ್ ಟೆಂಪಲ್ ಗೆ ಹೊರಟ್ವಿ. ಗೋಲ್ಡನ್ ಟೆಂಪಲ್ ಹಾಗು ಅಲ್ಲಿನ infrastructure ಅದ್ಭುತವಾಗಿದೆ. ದೇವಸ್ಥಾನದ ತೀರ್ಥದ ಕೊಳಕ್ಕೆ ಭಕ್ತರು  ಚಿಲ್ಲರೆ (coin) ಹಾಕೋದೆ ಎಲ್ಲರೂ ನೋಡಿರ್ತೀರ, ಆದರೆ ಇಲ್ಲಿ ಬರುವ ಭಕ್ತಾದಿಗಳು ಇನ್ನು ಒಂದು ಸ್ಟೆಪ್ ಮುಂದೆ ಹೋಗಿ Credit & Debit Card ಗಳನ್ನೇ ತೀರ್ಥದ ಕೊಳಕ್ಕೆ ಹಾಕಿದಾರೆ.  ದೇವರು ಕೂಡ ಇನ್ಮೇಲೆ swiping machine ತಗೋಬೇಕು ಅಂತಾಯ್ತು.!! ಟೆಂಪಲ್ ನೋಡ್ಕೊಂಡು, ಊಟ ಮಾಡಿ, ವೆಲ್ಲೊರು ಕೋಟೆ (fort) ನೋಡೋಕೆ ಬಂದ್ವಿ  ಕೋಟೆ ಸುತ್ತಲು ನಡೆದು, ನಡೆದು ಸುಸ್ತಾಗೊಯ್ತು ಎಲ್ಲರಿಗೂ. ಅಷ್ಟರಲ್ಲೇ ಸಂಜೆ ಆಯ್ತು. ಅಲ್ಲಿಂದ ಸೀದಾ ತಿರುಪತಿ ಬಸ್ ಹಿಡಿದು ತಿರುಪತಿ ತಲುಪಿದ್ದು 9 ಗಂಟೆ ಆಯ್ತು. ಇಷ್ಟೊತ್ತು ಕಾಲು ನೋವು ಮಾತ್ರ ಇತ್ತು ಈಗ ಭುಜ ಕೂಡ ನೋವಾಗಿತ್ತು, ಕಾರಣ ನನ್ನ ಎರಡು ಭುಜದ ಮೇಲೆ ಇಬ್ರು ತಲೆ ಇಟ್ಟು  ಆರಾಮಾಗಿ ಮಲಗಿ ನಿದ್ರೆ  ಮಾಡಿದ್ರು!!  ತಿರುಪತಿಯಲ್ಲಿ ಟಿ. ಟಿ. ಡಿ. ಗೆಸ್ಟ್ ಹೌಸಿನಲ್ಲಿ  ನಾವು ಮೊದಲೇ ರೂಮುಗಳನ್ನು ಬುಕ್ ಮಾಡಿದ್ರಿಂದ ರೂಂ ಹುಡುಕಿಕೊಂಡು ಅಲೆಯೋದು ಇರಲಿಲ್ಲ. ಊಟಕ್ಕೆ ಒಳ್ಳೆ ಹೋಟೆಲ್ ಹುಡುಕಿಕೊಂಡು ನಡೆದು, ನಡೆದು ಮತ್ತೆ ಸುಸ್ತಾಗೊಯ್ತು. ಊಟ ಮಾಡಿ ಬಂದು ಮಲಗೋದು 11.30 ಆಯ್ತು. ನಾವು 6 ಜನ ಹುಡುಗ್ರು ಇದ್ವಿ. 3 ರೂಮು ತಗೊಂಡಿದ್ವಿ.  3 ಜನ, 3 ಜನ ಹುಡುಗ್ರು 2 ರೂಮಿನಲ್ಲಿದ್ವಿ. ಪಾಪ ನಮ್ಮ ಗೆಳತಿಯರು 6 ಜನ ಒಂದೇ ರೂಮಿನಲ್ಲಿ ಹೊಂದಾಣಿಕೆ (adjust) ಮಾಡಿಕೊಂಡು ಮಲಗಿದರು.

ಮಾರನೆ ದಿನ ಬೆಳಗ್ಗೆ ಅಂದ್ರೆ ಭಾನುವಾರ ಬೆಳಗಿನ ಜಾವ 3 ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ ಹೊರಟ್ವಿ. ಚಳಿ ಬೇರೆ ಸಣ್ಣದಾಗಿ ಮಳೆ ಬೇರೆ ಬರ್ತಾ ಇತ್ತು.  ತಿರುಪತಿಯಿಂದ  ತಿರುಮಲಕ್ಕೆ ಬೆಟ್ಟ ನಡೆದು ಹತ್ತೋದು ಅಂತ ಮೊದಲೆ ಪ್ಲಾನ್ ಮಾಡಿದ್ವಿ. ಬೆಟ್ಟ  ಹತ್ತುವ ಜಾಗಕ್ಕೆ (ಅಳಪಿರಿ) ಬರೋದ್ರಲ್ಲಿ 4.30 ಆಯ್ತು. ಮೊದಲು ಸ್ವಲ್ಪ ಬೆಟ್ಟ ಹತ್ತೋವಾಗ ಎಲ್ಲರಿಗೂ ಫುಲ್ ಜೋಶ್ ಇತ್ತು. ಎಲ್ಲೂ ರೆಸ್ಟ್ ತಗೊಳ್ದೆ ಹತ್ತೋಣ ಅಂತ ಅನ್ಕೊಂಡು  ಶುರು ಮಾಡಿದ್ವಿ. ಆಮೇಲೆ ಸ್ವಲ್ಪ ಸ್ಟೆಪ್ಸ್ ಹತ್ತೋದು, ಕೂರೋದು, ಮಾಡ್ಕೊಂಡು 6.30 ಗೆ  ಗಾಳಿ ಗೋಪುರ (3 ನೇ ಬೆಟ್ಟ) ತಲುಪಿದ್ವಿ. ಅಲ್ಲಿ ದರ್ಶನದ ಟೋಕನ್ ತಗೊಂಡು, ಕಾಫಿ ಕುಡಿದು ಸ್ವಲ್ಪ ಹೊತ್ತು ಆರಾಮಾಗಿ ಕುಳಿತು ಮತ್ತೆ ನಡಿಯೋಕೆ ಶುರು ಮಾಡಿದ್ವಿ. ಚಳಿ ಎಲ್ಲಾ ಓಡಿ ಹೋಗಿ, ಸೆಖೆ ಶುರುವಾಗಿತ್ತು ಬೆಟ್ಟ ಹತ್ತುವಾಗ. ಅಂತೂ ಇಂತೂ 10.30 ಗೆ ತಿರುಮಲ ತಲುಪಿದ್ವಿ. ತಿರುಮಲ ಹೋದವರು ತಿಂಡಿ ತಿನ್ನೋಕೆ ಹೋಟೆಲ್ ಗೆ ಹೋದ್ವಿ. ಅದು ಎಷ್ಟ್ ತಿಂದ್ವಿ, ಹೇಗೆ ತಿಂದ್ವಿ ಅನ್ನೋದು ಇನ್ನು ನಂಗೆ ಸರಿ ಅರ್ಥ ಆಗ್ತಿಲ್ಲ. ಕಾರಣ, ಆರ್ಡರ್ ಮಾಡಿದ್ದನ್ನು ಬೇರರ್ ತಂದಿಟ್ಟು 2 ನಿಮಿಷಕ್ಕೆ ಎಲ್ಲಾ ಖಾಲಿ.!! ಮತ್ತೆ ಆರ್ಡರ್ ಮಾಡೋದು, ಪಾಪ ಆ ಬೇರರ್ ನಮ್ಮನ್ನು ನೋಡಿ  ಎಷ್ಟೋ ದಿನದಿಂದ ಏನೂ ತಿಂದೆ ಇಲ್ವೇನೋ ಅಂತ ಅಂದು ಕೊಂಡಿರ್ತಾನೆ. ಆಮೇಲೆ ದರ್ಶನಕ್ಕೆ ಕ್ಯೂ ನಲ್ಲಿ ನಿಂತ್ವಿ. 12 ಗಂಟೆಗೆ ಹೋಗಿದ್ವಿ, 4 ಗಂಟೆಗೆ ದರ್ಶನ ಆಯ್ತು. ಆ ಟೈಮ್ (4 hour)  ಹೇಗೆ ಪಾಸ್ ಆಯ್ತು ಅಂತಾನೆ ಗೊತ್ತಾಗಿಲ್ಲ. ಬರಿ ಜೋಕ್ಸ್, ನಗು, ನಗು, ನಗು, ಮಾತು, ಮಾತು, ಮಾತು. ಒಬ್ಬಳು ಗೆಳತಿಗಂತೂ  ನಕ್ಕು, ನಕ್ಕು ಹೊಟ್ಟೆ ನೋವು ಬಂತು. ಹುಡ್ಗೀರಿಗೆ ನಗೋಕಾಗದೆ ಎಲ್ಲಾ ಹುಡ್ಗೀರು ಸೇರಿ ನನಗೆ ಚಿವುಟಿ, ಚಿವುಟಿ ನನ್ನ ಕೈ ಊದಿಸಿದ್ರು Idiots. ಇನ್ನು ಅದರ ನೋವು ಹೋಗಿಲ್ಲ.. : (

ಬೆಟ್ಟ ಇಳಿಯುವಾಗ ಬಸ್ಸಿಗೆ ಬಂದ್ವಿ, ರೂಮಿಗೆ ಬಂದು ಫ್ರೆಶ್ ಆಗಿ ರಾತ್ರಿಯ return journey ಗೆ ರೆಡಿ ಆದ್ವಿ.  ಎಲ್ಲರೂ ತುಂಬಾನೇ ಸುಸ್ತಾಗಿದ್ವಿ.  ರೈಲಿನಲ್ಲಿ ಮೊದಲೆ ರಿಸರ್ವೇಶನ್ ಮಾಡಿಸಿದ್ದರಿಂದ ಸೀಟಿನ ಪ್ರಾಬ್ಲಂ ಏನು ಆಗಿಲ್ಲ. ಆರಾಮಾಗಿ ನಿದ್ರೆ ಮಾಡಿ ಸೋಮವಾರ  ಬೆಳಗ್ಗೆ  7 ಗಂಟೆಗೆ ಬೆಂಗಳೂರು ಬಂದು ತಲುಪಿದ್ವಿ. ಜೀವನ ಪೂರ್ತಿ ಮರೆಯದ, ತುಂಬಾ ಖುಷಿಯಿಂದ ಟ್ರಿಪ್ ಮುಗಿಸಿದ್ವಿ. ಇಷ್ಟು ಬೇಗ 2 ದಿನ ಮುಗಿದೇ ಹೋಯ್ತಲ್ಲ ಅನ್ನೋ ಬೇಸರ  ಮಾತ್ರ ಎಲ್ಲರಲ್ಲೂ ಹಾಗೆ ಇತ್ತು.  

Thursday, December 2, 2010

ಮಂಗಳೂರೆಂಬ ಮಾಯಾ ನಗರಿ.

ಮೊನ್ನೆ ಯಾವುದೋ ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿದ್ದೆ. ಮಂಗಳೂರಿನ ಪ್ರಯಾಣದ ಅನುಭವ ಮತ್ತು ಅನಿಸಿಕೆ ನಿಮ್ಮ ಮುಂದಿಡೋಣ ಅಂತ ಈ ಬರಹ. 

ಮಧ್ಯಾಹ್ನದ ವರೆಗೆ ನನ್ನ ವೈಯುಕ್ತಿಕ ಕೆಲಸದಲ್ಲಿದ್ದೆ. ಸಂಜೆ ಬಿಡುವು ಮಾಡಿ ಕೊಂಡು ಮಂಗಳೂರಲ್ಲಿ ಒಂದು ರೌಂಡ್ ಹೊಡಿಯೋಣ ಅಂತ ನನ್ನ ಗೆಳಯನೊಬ್ಬನ  ಜೊತೆ ಹೊರಟೆ. ಮಂಗಳಾದೇವಿ ಯಿಂದ ಸ್ಟೇಟ್ ಬ್ಯಾಂಕ್ ಬಸ್ ಸ್ಟಾಪ್ ಗೆ ಬಂದು ಅಲ್ಲಿಂದ M G ರೋಡ್ ಗೆ ಅಂತ ಹೊರಟಾಯ್ತು. ಅಷ್ಟರಲ್ಲಿ ನನ್ನ ಒಬ್ಬ ಕಲೀಗ್ ಮಗನ ಹುಟ್ಟು ಹಬ್ಬಕ್ಕೆ ಗಿಫ್ಟ್ ತಗಳೋಕೆ ಸಿಟಿ ಸೆಂಟರ್ ಗೆ ಹೋದ್ವಿ. ಅಬ್ಬಾ, ಬೆಂಗಳೂರಿನಲ್ಲಿ ನಡಿಯೋದಕ್ಕಿಂತ ಜಾಸ್ತಿ ಮೋಸ ಮಂಗಳೂರಿನಲ್ಲಿ  ನಡಿಯತ್ತೆ. ಅದರಲ್ಲೂ ತುಳು ಭಾಷೆ ಬಾರದಿದ್ರೆ ಮುಗಿದೇ ಹೋಯ್ತು. ಆಟೋದವರು ಕಿತ್ತು ತಿನ್ನೋಕೆ ರೆಡಿ ಇರ್ತಾರೆ. 

ಅಲ್ಲಿಂದ ideal ice cream parlor ಗೆ ಹೋಗಿದ್ದಾಯ್ತು.  ಅದೇನು ಐಸ್ ಕ್ರೀಂ ಪಾರ್ಲರ್ರೋ   ಅಥವಾ ಲೇಡೀಸ್ ಹಾಸ್ಟೆಲ್ಲೋ ಅನ್ನೋ ಹಾಗಿತ್ತು. ಐಸ್ ಕ್ರೀಂ ರುಚಿ ಮಾತ್ರ  ಅದ್ಭುತ. ಹಾಗೆ ಅಲ್ಲಿದ್ದ ಹುಡುಗೀರು ಕೂಡ...! ಎಲ್ಲದರಲ್ಲೂ (include Low waste jeans ಹಾಕೋ ಹುಡ್ಗೀರು) ಮಂಗಳೂರಿನ M G ರೋಡ್ ಬೆಂಗಳೂರಿನ M G ರೋಡ್ ಗಿಂತ  ಐಶಾರಾಮಿ ಆಗಿದೆ ಹಾಗು ಅಲ್ಲಿನ ಜನ ಕೂಡ ಐಶಾರಾಮಿ.

ಆದರೆ ಅಲ್ಲಿನ ರೋಡ್ ಮಾತ್ರ ತುಂಬಾ ಹಾಳಾಗಿದೆ. ಹೈವೇ ಮಾತ್ರ ಪರವಾಗಿಲ್ಲ. ಸಿಟಿ ಒಳಗೆಲ್ಲ ಅಷ್ಟೇನೂ ರೋಡ್ ಚನ್ನಾಗಿಲ್ಲ. ತುಂಬಾ confuse ಆಗೋ ಹಾಗಿದೆ ಕಣ್ರೀ ರೋಡ್ ಗಳು. ನನ್ನ ಮತ್ತು ಮಂಗಳೂರಿನ ಒಡನಾಟ ತುಂಬಾ ವರ್ಷದಿಂದ ಇದೆ. ಪ್ರತಿ ಸಾರಿ ಮಂಗಳೂರಿಗೆ ಹೋದಾಗಲು ಮುಂದಿನ  ಬಾರಿ ಇಲ್ಲಿಗೆ ಬರುವ ಮೊದಲು (೩-೪ ವರ್ಷದಿಂದ) ಸುರತ್ಕಲ್, ಮಂಗಳೂರಿನ ನಡುವಿನ  fly over ready ಆಗಿರತ್ತೆ ಅನ್ಕೋತೀನಿ. ಆದರೆ ಅದು ಇನ್ನು ಸಾಧ್ಯ ಆಗ್ಲೇ ಇಲ್ಲ. ಮಂಗಳೂರು ಮತ್ತು ಉಡುಪಿ ನಡುವಿನ express bus ನಲ್ಲಿ ಕೂರೋದೇ ಒಂದು ಥ್ರಿಲ್. ಎಷ್ಟು ಫಾಸ್ಟ್ ಆಗಿ ಡ್ರೈವ್ ಮಾಡ್ತಾರೆ ಆ ಡ್ರೈವರ್ ಗಳು. ಒಳ್ಳೊಳ್ಳೆ ಹೋಟೆಲ್ಲುಗಳಿವೆ, ವಿದ್ಯಾ ಸಂಸ್ಥೆಗಳಿವೆ, ಆಸ್ಪತ್ರೆಗಳು ಎಲ್ಲಾ ಚನ್ನಾಗಿವೆ. ಆದರೆ ತುಳು ಬಾರದ ಜನರನ್ನು ಅವರು ನೋಡುವ ರೀತಿ ಅಸಹ್ಯ ಹುಟ್ಟಿಸುತ್ತೆ. ಅದೊಂದೇ ಅವರ ಬ್ಯಾಕ್ ಡ್ರಾಪ್ ಅನ್ಕೋತೀನಿ.

Wednesday, September 22, 2010

ಗರಿಗೆದರಿದ ನೆನಪು..

ಮೊನ್ನೆ ಹಬ್ಬಕ್ಕೆ ಅಂತ ಊರಿಗೆ ಹೋದಾಗ ಮನಸ್ಸಿನಲ್ಲಿ ಕೆಲವು ಹಳೆಯ ನೆನಪುಗಳು ಬಿಚ್ಚಿಕೊಂಡವು. ನನ್ನ ತಮ್ಮ, ಅಣ್ಣ ನಾನು 'ಕ್ರಿಕೆಟ್ ಆಡೋಕೆ ಹೊರಟೆ' ಅಂತ ಹೇಳ್ದ. ಕ್ರಿಕೆಟ್ ಬಿಟ್ಟು ಬೇರೆ ಯಾವ ಆಟ ಆಡ್ತಿರ ಅಂತ ಕೇಳ್ದೆ. ಸ್ಕೂಲಲ್ಲಿ ಬ್ಯಾಡ್ಮಿಂಟನ್, ವಾಲಿಬಾಲ್ ರಜೆ ಇದ್ದಾಗ ಕ್ರಿಕೆಟ್ ಆಡ್ತೀವಿ ಅಂತ ಹೇಳ್ದ. ಬೇರೆ ಯಾವ ಆಟಾನೂ ಆಡಲ್ವ ಅಂತ ಕೇಳಿದ್ರೆ 'ಇಲ್ಲ' ಅಂತ ಚುಟುಕಾಗಿ ಉತ್ತರಿಸಿದ.  ಈಗಿನ ಹುಡುಗರಿಗೆ ಈ ಕ್ರಿಕೆಟ್ ಬಿಟ್ಟು ಬೇರೆ ಹಳ್ಳಿ ಆಟಗಳು ಗೊತ್ತೇ ಇಲ್ಲ ಅನ್ಸತ್ತೆ..!!

ಅದೇ ನಾವು ಚಿಕ್ಕವರಿದ್ದಾಗ, ನನ್ನ ಊರಿನ ಬೇರೆ ಗೆಳೆಯ/ಗೆಳತಿಯರೊಂದಿಗೆ ಕ್ರಿಕೆಟ್ ಜೊತೆಗೆ ಕಣ್ಣಾಮುಚ್ಚಾಲೆ, ಉಪ್ಪಾಟ, ಚರಾಪ್, ಕಲ್ಲು ತೆಗಿಯೋ ಆಟ, ಮರ ಕೋತಿ, ಚಿನ್ನಿ ದಾಂಡು, ಕಂಬ ಕಂಬದ ಆಟ ಇವೆಲ್ಲ ಔಟ್ ಡೋರ್ ಆಟಗಳಾದ್ರೆ, ಮಳೆಗಾಲದಲ್ಲಿ (Indoor games)  ಬಳೆಚೂರುಗಳಲ್ಲಿ  ಸೆಟ್ ಆಟ, ಹಿಡಿ (ಪೊರಕೆ) ಕಡ್ಡಿಗಳನ್ನು ಕಟ್ ಮಾಡಿ ಅದರಿಂದ ಕಡ್ಡಿ ತೆಗೆಯೋ ಆಟ, ಚೀಟಿ ಆಟ, ಚನ್ನೆ ಮಣೆ  ಅಬ್ಬಾ ಹೀಗೆ ಎಷ್ಟೊಂದು ಆಟಗಳು. ಇನ್ನೊಂದು ಅಂದ್ರೆ ಸೈಕಲ್ ಹೊಡಿಯೋದು. ಆದರೆ ಈಗಿನ ಮಕ್ಕಳಿಗೆ ಇದ್ಯಾವುದರಲ್ಲೂ ಇಂಟರೆಸ್ಟ್ ಇಲ್ಲ.

ಆಗ ರಜೆ ಬಂತು ಅಂದ್ರೆ ನಮ್ಮೂರಿಗೆ ಅಜ್ಜನ ಮನೆಗೆ ಬರುತ್ತಿದ್ದವರು ಕೂಡ ಜಾಸ್ತಿ ಇದ್ರು. ಈಗ ರಜೆ ಬಂತು ಅಂದ್ರೆ ಸಮ್ಮರ್ ಕ್ಯಾಂಪ್, ಕಂಪ್ಯೂಟರ್ ಕ್ಲಾಸ್ ಅಂತ ಹೋಗ್ತಾರೆ ಹೊರತು, ಅಜ್ಜನ ಮನೆಯ ರಜದ ಮೋಜು ಈಗಿನ ಮಕ್ಕಳಿಗೆ ಸಿಗ್ತಿಲ್ಲ ಅನ್ಕೋತೀನಿ. ಈಗ ಆ ನನ್ನ ಹಲವು ಗೆಳೆಯ/ ಗೆಳತಿಯರಿಗೆ ಮದುವೆ ಆಗಿ ಸಂಸಾರವೆಂಬ ಸಾಗರದಲ್ಲಿ ಮುಳುಗಿದ್ದಾರೆ.  ಇನ್ನು ಕೆಲವರು ಹೆಚ್ಚಿನ ವಿದ್ಯಾಭ್ಯಾಸ  ಹಾಗು ಉತ್ತಮ ಕೆಲಸಕ್ಕೋಸ್ಕರ ಬೇರೆ ಬೇರೆ ಊರುಗಳಲ್ಲಿ ನೆಲಸಿದ್ದಾರೆ. ಈಗ ಊರಿಗೆ ಹೋದರೆ ಮೊದಲಿನ ಹಾಗೆ ಓರಿಗೆಯ ಗೆಳಯ, ಗೆಳತಿಯರು ಸಿಗಲ್ಲ.

ನನಗಂತೂ ಈ ಬೆಂದಕಾಳೂರಿನ ಜೀವನದ ಜಂಜಾಟದಲ್ಲಿ ಅಜ್ಜನ ಮನೆಯ ಹಾದಿಯೇ ಮರೆತ ಹಾಗಿದೆ. ಮೊನ್ನೆ ಅಷ್ಟಮಿ ಹಬ್ಬಕ್ಕೆ ಬಂದ ಮಾವ 'ನೀನು ನಮ್ಮ ಮನೆಗೆ ಬಂದರೆ ಮಾತ್ರ ಇನ್ನು ನಾವು ನಿಮ್ಮ ಮನೆಗೆ  ಬರ್ತೀವಿ. ನಿನನಗೆ ಬೇರೆ ಎಲ್ಲಾ ಕಡೆ ಹೋಗೋಕೆ ಆಗತ್ತೆ, ಅಜ್ಜನ ಮನೆ ನೆನಪು ಇರಲ್ಲ ಅಲ್ವಾ?' ಅಂತ ಹೇಳಿ, ನನಗೆ ಪ್ರೀತಿಯಿಂದ ಗದರಿಸಿ ಹೋದರು. ಅವರು ಹೇಳಿದ್ದು ನಿಜ ಅನಿಸ್ತು. ಅದಕ್ಕೆ   ಸಧ್ಯದಲ್ಲೇ ಒಂದು ವಾರ ಕೆಲಸಕ್ಕೆ ರಜೆ ಹಾಕಿ ಅಜ್ಜನ ಮನೆಗೆ ಹೋಗೋ ಪ್ಲಾನ್ ಹಾಕಿದೀನಿ. ಮೊಬೈಲ್, ಇಂಟರ್ನೆಟ್ ಅಂತ ಯಾವುದರ ಚಿಂತೆ ಇಲ್ಲದೆ ಎಲ್ಲಾ ಮರೆತು ಹಾಯಾಗಿ ಕಾಲ ಕಳೆಯಬೇಕು ಅಂತಿದೀನಿ.

ಇದನ್ನ ಓದುತ್ತಿರುವ ನೀವು ಕೂಡ ಈ ಹಳ್ಳಿ ಆಟಗಳನ್ನೆಲ್ಲ ಆಡಿದೀರಿ ಅನ್ಕೋತೀನಿ. ಈಗ ಎಷ್ಟೇ ಇಷಾರಾಮಿ ಜೀವನ ಇದ್ರು, ವೀಡಿಯೊ ಗೇಮ್ಸ್ ಇದ್ರು ಆಗ ಸಿಗುತ್ತಿದ್ದ ಖುಷಿ  ಈಗ ಸಿಗಲ್ಲ. ಆಟ ಆಡುವಾಗ ಬಿದ್ದು ಗಾಯ ಮಾಡ್ಕೊಂಡು, ಮನೆಗೆ ಹೋಗಿ ಬೈಸಿಕೊಂಡಿದ್ದು ಇದನ್ನೆಲ್ಲ ನೆನಪು ಮಾಡ್ಕೊಂಡ್ರೆ ಈಗಲೂ ಮುಖದಲ್ಲಿ ಮಂದಹಾಸ ಮೂಡತ್ತೆ.   

Thursday, September 9, 2010

ಗುರುವೇ ನಮಃ

ಸಮಯದ ಅಭಾವದಿಂದ ಈ ಲೇಖನ ಶಿಕ್ಷಕರ ದಿನದಂದು ಬರಿಯೋಕೆ ಆಗಿಲ್ಲ.. ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಅನ್ನೋ ಶ್ಲೋಕ ಎಲ್ಲರಿಗೂ ಗೊತ್ತೇ ಇದೆ. ಅಂದರೆ ಒಬ್ಬ ಗುರು ತ್ರಿಮೂರ್ತಿಗಳ ಹಾಗೆ ಸೃಷ್ಟಿ ಕರ್ತನಾಗಿ, ಸ್ಥಿತಿ ಕರ್ತನಾಗಿ ಹಾಗು ಲಯ ಕರ್ತನಾಗಿ ಕೆಲಸ ಮಾಡ್ತಾರೆ ಅಂತಾಯ್ತು. ನಮ್ಮ ಸನಾತನ ಧರ್ಮದಲ್ಲಿ ಗುರುವಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟಿದಾರೆ. ಗುರುವಿಗೆ ಅನ್ಯ ಏನೂ ಇಲ್ಲ.

ಒಬ್ಬ ಗುರು ಬ್ರಹ್ಮನ ಹಾಗೆ  student ನ ಹುಟ್ಟು ಹಾಕ್ತಾರೆ, ವಿಷ್ಣುವಿನ ಹಾಗೆ ಒಳ್ಳೆಯ ದಾರಿಯಲ್ಲಿ ನಡೆಸ್ತಾರೆ, ಒಂದುವೇಳೆ ಆ student ಕೆಟ್ಟವನಾಗಿದ್ರೆ ಅಂತಹವರನ್ನು ಈಶ್ವರನ ಹಾಗೆ ಸಂಹಾರ ಕೂಡ ಮಾಡ್ತಾರೆ. ಆದರೆ ಈಗ ಕಾಲ ಬದಲಾದ ಹಾಗೆ ಸಂಸ್ಕೃತಿ, ವಾತಾವರಣ ಎಲ್ಲವೂ ಬದಲಾಗಿದೆ. ಮೊದಲು ದೇವರ ರೂಪದಲ್ಲಿ ನೋಡ್ತಿದ್ದ Teacher ಗಳನ್ನ ಇವತ್ತು ಒಬ್ಬ ಫ್ರೆಂಡ್ ರೂಪದಲ್ಲಿ ನೋಡೋಕೆ ಪ್ರಯತ್ನಿಸ್ತೀವಿ.  

ಇದನ್ನೆಲ್ಲಾ ಈಗ ಯಾಕೆ ಹೇಳ್ತಿದೀನಿ ಅಂದ್ರೆ, ನನ್ನ Friend Circle ನಲ್ಲಿ ನಾಲ್ಕು ಜನ ಟೀಚರ್ ಇದಾರೆ ಅನ್ನೋದೇ ನಂಗೆ ಖುಷಿ ಕೊಡೊ ವಿಚಾರ. ಅವರ ಬಗ್ಗೆ ಸ್ವಲ್ಪ ಹೇಳ್ತೀನಿ. ಮೊದಲನೆಯವಳು ಆಶಾ ಹೆಗಡೆ, ಊರು ಹೊನ್ನಾವರ.  ನಾನು B.com ಸೇರೋಕೆ advice ಮಾಡಿದೊಳು. ನಾನು ಕಾಲೇಜಿಗೆ  ಸೇರೋಕೆ ಒಳ್ಳೆ support ಮಾಡಿದ್ಲು.  M.A in English and M.A in Political Science ಮಾಡಿದಾಳೆ. ನಾವು ಒಮ್ಮೆ ಮಾತ್ರ ಮುಖತಃ ಭೇಟಿ ಆಗಿದ್ದು. ಸ್ವಲ್ಪ ಸಂಕೋಚ ಸ್ವಭಾವದ ಹುಡುಗಿ.   ಎರಡನೆಯವಳು ಶೈಲಾ ಅಂತ. ಬೆಂಗಳೂರಿನವಳು ಆರ್ಕುಟ್ ನಲ್ಲಿ ಪರಿಚಯ ಆಮೇಲೆ ಹೆಮ್ಮರವಾಗಿ ಬೆಳೆದ ಗೆಳೆತನ. ಬಿ. ಎ. ಮಾಡಿ ಈಗ ಟೀಚರ್ ಕೆಲಸ ಮಾಡ್ತಾನೆ correspondence ನಲ್ಲಿ M.B.A ಮಾಡ್ತಿದಾಳೆ. ತುಂಬಾನೇ ಮಾತುಗಾರ್ತಿ. 'ಏನಾದ್ರು ಕೋರ್ಸ್ ಮಾಡ್ಬೇಕು ಅಂತಿದೀನಿ ಶೈಲು' ಅಂತ ಹೇಳಿದಾಗ ಯಾವ ಯಾವ ಕೋರ್ಸ್ ಇದೆ, ಏನೇನು ಉಪಯೋಗ ಅಂತೆಲ್ಲ ಹುಡುಕಾಡಿ ಹೇಳಿದ್ಲು.  ಮೂರನೆಯವಳು ಮಧುರಾಣಿ ಶರ್ಮ ಅಂತ. ಊರು ಕೋಟೆನಾಡು ಅಂತ ಕರೆಯುವ  ಚಿತ್ರದುರ್ಗ. ಬಿ. ಎ. ಮಾಡಿ ಬೆಂಗಳೂರಿನಲ್ಲಿ ಟೀಚರ್ ಆಗಿದಾರೆ. ಮುಂದೆ M.Sc and B.Ed  ಮಾಡ್ಬೇಕು  ಅಂತಿದಾಳೆ. ನಮ್ಮ ಕಡೆಯಿಂದ 'ಶುಭ ಹಾರೈಕೆಗಳು'. ಇಷ್ಟೇ ಅಲ್ಲ ಮಧು ಒಳ್ಳೆಯ ಬರಹಗಾರ್ತಿ ಕೂಡ ಹೌದು. ವಿಜಯ ಕರ್ನಾಟಕ ಪೇಪರ್, ಲವಲವಿಕೆಯ ಸಿಂಪ್ಲಿಸಿಟಿ ಪೇಜ್ ನಲ್ಲಿ ಲೇಖನ ಬರಿತಾರೆ. ಹಾಗೆ ಕನ್ನಡ ಸಿನೆಮಾಗೆ voice dubbing ಕೂಡ ಮಾಡಿದಾರೆ, ಮಾಡ್ತಾರೆ.  ಮಧು ಪರಿಚಯ ಆಗಿದ್ದು  ನನ್ನ ಒಬ್ಬಳು ತಂಗಿಯ ಮದುವೆಯಲ್ಲಿ. ಆಮೇಲೆ ಎಷ್ಟೋ ದಿನದ ನಂತರ ಅಚಾನಕ್ ಆಗಿ ಬೆಳೆದ ಸ್ನೇಹ. 'ನಗು ನಗುತಾ ನಲಿ' ಅನ್ನೋ ಹಾಡಿನ ಹಾಗೆ ನಗ್ತಾ, ಮಾತಾಡ್ತಾ ಇರ್ತಾರೆ. ಇನ್ನೊಬ್ಬಳು ನನ್ನ ಸಂಜೆ ಕಾಲೇಜಿನ classmate Catherin (ನಮ್ಮೆಲ್ಲರ ಪ್ರೀತಿಯ 'Cat') ಇವಳು ದಿನದ ಸಮಯದಲ್ಲಿ primary school ನಲ್ಲಿ  ಟೀಚರ್ ಆಗಿ ಕೆಲಸ ಮಾಡ್ತಾಳೆ, ಸಂಜೆ ಇವಳೇ student ಆಗ್ತಾಳೆ!. ನಾಟಕ, ಹಾಡು, dance ಹೀಗೆ ಎಲ್ಲಾ cultural  activities ನಲ್ಲಿ ಕೂಡ ಮುಂದೆ ಇದಾಳೆ. 'ನೀನೆ ಮಗು ಆಡಿದ ಹಾಗೆ ಆಡ್ತಿಯ, ಇನ್ನು ಅ ಮಕ್ಕಳಿಗೆ ಏನು  ಪಾಠ ಹೇಳಿ ಕೊಡ್ತೀಯ?' ಅಂತ ರೆಗಿಸ್ತೀವಿ. 'ಏ ಹೋಗೋ ನೀನು' ಅಂತ ಹೇಳಿ ಸುಮ್ಮನಾಗ್ತಾಳೆ. ಇವರೆಲ್ಲರೂ ನನ್ನ Best Friends ಅಂತ ಹೇಳ್ಕೊಳ್ಳೋಕೆ ಖುಷಿ ಆಗತ್ತೆ...


ಈಗ ನೀವು ಯಾರನ್ನಾದರು ಮುಂದೆ ಏನಾಗಬೇಕು ಅಂತಿದೀಯ ಅಂದ್ರೆ ಎಲ್ಲರು ಇಂಜಿನಿಯರ್ ಆಗ್ತೀನಿ, doctor ಆಗ್ತೀನಿ, MBA ಮಾಡ್ತೀನಿ ಅಂತ ಹೇಳ್ತಾರೆ. ಆದರೆ ಟೀಚರ್ ಆಗ್ತೀನಿ ಅಂತ ಹೇಳೋರು ಕಡಿಮೆ. ಆದರೆ ಈ ನನ್ನ ಎಲ್ಲಾ ಗೆಳತಿಯರು ಕೂಡ ಇದೇ ಕೆಲಸ ಬೇಕು ಅಂತ ಆಸೆ ಪಟ್ಟು ಮಾಡ್ತಾ ಇದಾರೆ. really hats of to all. Happy Teachers Day (Belated)