Tuesday, August 3, 2010

ನನ್ನ ಪ್ರೀತಿಯ ಹುಡುಗಿ,
ತುಂಬಾ ದಿನಗಳ ನಂತರ ನಿನಗೊಂದು  ಪತ್ರ ಬರಿಯೋಣ ಅನ್ನಿಸ್ತು. ಹಾಗಾಗಿ ಏನು ಅನ್ನಿಸತ್ತೋ ಅದನ್ನೇ ಬರೆದು  ಬಿಸಾಕ್ತೀನಿ. ಆದರೆ ಪೋಸ್ಟ್ ಮಾಡ್ತೀನೋ ಇಲ್ವೋ ಗೊತ್ತಿಲ್ಲ.

ನನ್ನ ದಿನಚರಿ  ಶುರು ಆಗೋದು ನಿನ್ನ good moring message ನಿಂದ ಹಾಗು ಮುಗಿಯೋದು ನಿನ್ನ good night, sweet dreams message ನಿಂದ. ಆದರೆ ಈಗ 3 ದಿನದಿಂದ ನಿನ್ನ ಕಡೆಯಿಂದ ಫೋನ್ ಇಲ್ಲ , ಮೆಸ್ಸೇಜ್ ಇಲ್ಲ. ಅದು ಆ ಹಾಳಾದ ನೆಟ್ ವರ್ಕ್ ತೊಂದರೆ ಇದ್ದರೂ ಇರಬಹುದು. ಒಟ್ಟಿನಲ್ಲಿ ನನ್ನ bad luck.

ಈಗ  ಒಂದು  ತಿಂಗಳ  ಮುಂಚೆ ಒಂದಿನ ಇಬ್ರು ಮಾತಾಡಿರಲಿಲ್ಲ. ಬೇರೆ ಹುಡ್ಗನ್ನ ಹುಡುಕಿ ಮದ್ವೆ ಮಾಡ್ಕೋ ಅಂತ ರೆಗ್ಸಿದ್ದೆ ಹಾಗು  ಏನೋ ಒಂದು ಚಿಕ್ಕ missunderstand ನಿಂದ. ಮಾರನೆ ದಿನ ನೀನು ಕಾಲ್ ಮಾಡಿ ತುಂಬಾ ಅತ್ತಿದ್ದೆ ಹಾಗು 'ನಿನ್ನನ್ನ ಬಿಟ್ಟಿರೋಕೆ ಆಗಲ್ಲ , ನನ್ನ ಕರ್ಕೊಂಡ್ ಹೋಗು. ನಾನು ಬೇರೆ ಹುಡ್ಗನ್ನ ಮದ್ವೆ ಆದ್ರೆ ನಮ್ಮಿಬ್ಬರ ಜೀವನ ಕೂಡ ಹಾಳಾಗತ್ತೆ' ಅಂತೆಲ್ಲ ಹೇಳಿದ್ದೆ ಅಲ್ವಾ? ಅಂದ್ರೆ ನಿನ್ನ ಮಾತಿನ ಅರ್ಥ 'ನನ್ನ ಬಿಟ್ಟು ಹೋಗಬೇಡ' ಅನ್ನೋದಾಗಿತ್ತು. ಅದಕ್ಕೆ ನಾನು 'ಇಷ್ಟು  ಬೇಗ ನಿಮ್ ಮನೇಲಿ ಮದ್ವೆ ಮಾಡಲ್ಲ. ಇನ್ನು 3 ವರ್ಷ ಬಿಟ್ಟು ನಾವು ಮದ್ವೆ ಆಗೋಣ' ಅಂದಿದ್ದೆ.

ಕಳೆದ ವಾರ ನನಗೆ ಫೋನ್ ಮಾಡಿ, ನಿಂಜೊತೆ ಮಾತಾಡಬೇಕು ಕಾಲೇಜು ಹತ್ತಿರ ಇರೋ ದೇವಸ್ಥಾನಕ್ಕೆ ಬಾ ಅಂತ ಹೇಳ್ದೆ. ಮಾಮೂಲಿಯಾಗಿ ನಾವು ಸಂದಿಸುವ ಜಾಗ ಅದೇ ಅಲ್ವೇ? ಪ್ರೀತಿ ಹುಟ್ಟಿದ್ದು  ಕೂಡ ದೇವಸ್ಥಾನದ ಅಂಗಳದಲ್ಲೇ.  ದೇವಸ್ಥಾನದ ಹತ್ತಿರ ನನ್ ಬೈಕ್ ನಿಲ್ಲಿಸಿ ಇಬ್ರು ನಡೆದು ಹೊರಟ್ವಿ. ಆಗ ನಾನು ಗಮನಸಿದ್ದು ನಿನ್ನ ಮುಖದಲ್ಲಿರೋ ದುಗುಡ. ಒಂದೂ ಮಾತಾಡಿಲ್ಲ,  ಪಾನಿಪುರಿ ತಿಂದಿಲ್ಲ, ಇಷ್ಟ ಪಟ್ಟು ಎರಡು ಲೋಟ ಕುಡಿತ ಇದ್ದ  ಹಳ್ಳಿಮನೆ ಕಾಫಿ ಬೇಡ ಅಂತ ಬೇರೆ ಹೇಳ್ದೆ. ಆಗ ನನಗೆ ಗೊತ್ತಾಯ್ತು ವಿಷಯ ತುಂಬಾ ಗಂಭೀರ  ವಾಗಿದೆ ಅಂತ..ಆದರು ನಾನು ಕಾಫಿ ತಂದೆ.   ಎರಡು ಗುಟುಕು(sip) ಕಾಫಿ ಹೀರಿದ ಮೇಲೆ 'ಮನೆಯಲ್ಲಿ ನನಗೆ ಹುಡ್ಗ ನೋಡಿದಾರೆ 'ಶ್ರಾವಣದಲ್ಲಿ' ಮದುವೆ' ಅಂತ ಹೇಳ್ದೆ. ನಿನ್ನ ಮಾತಿನಿಂದ ಪಕ್ಕದಲ್ಲೇ ಬಾಂಬ್ ಬಿದ್ದ ಹಾಗೆ ಬೆಚ್ಚಿಬಿದ್ದೆ.   ಆ ಕ್ಷಣ ಅಲ್ಲಿ ಇಬ್ಬರದ್ದು ಬರಿ ಮೌನ ಮಾತ್ರ.

ಶ್ರಾವಣಕ್ಕೆ ಇನ್ನು ಒಂದು ವಾರ ಇದೆ ಅಷ್ಟೇ. ಅರ್ಥ ಇಲ್ಲದ, ಇಷ್ಟ ಇಲ್ಲದ ಎಷ್ಟೋ ಮದುವೆಗಳು ಈ 'ಶ್ರಾವಣದಲ್ಲಿ' ಭರ್ಜರಿಯಾಗಿ ನಡೆದು ಹೋಗುತ್ತವೆ. ನೀನು ಬೇರೊಬ್ಬನನ್ನು ಮದುವೆ ಆಗಿ ಸುಖವಾಗಿರ್ತಿ ಅನ್ನೋವಾಗ ಖುಷಿ  ಆಗತ್ತೆ ಹಾಗೆ ನನ್ನ ಬಿಟ್ಟು ಹೋಗ್ತಿಯಲ್ಲ ಅಂತ ಬೇಜಾರು ಕೂಡ ಆಗತ್ತೆ ಸತ್ತೊಗೋಣ ಅನ್ಸತ್ತೆ. ಒಮ್ಮೆ ಯಾವದಕ್ಕೋ ನಾನು ಸಾಯೋ ಮಾತಾಡಿದಾಗ 'ಯಾವದೇ ಕಾರಣಕ್ಕೂ ಸಾಯೋ ಮಾತಾಡಬೇಡ, ನಾನು ಸತ್ರು ಕೂಡ ನೀನು ನಿನ್ನ ಅಪ್ಪ-ಅಮ್ಮನಿಗೊಸ್ಕರ ಬದುಕಲೇ ಬೇಕು' ಅಂತ ನೀನೆ ಹೇಳಿದ್ದೆ.

ವಾಪಸು ಬಂದು ಬೈಕ್ ನಲ್ಲಿ  ನಿನ್ನ ಕೂರಿಸ್ಕೊಂಡು ಹೊರಟೆ ದಾರಿಯುದ್ದಕ್ಕೂ ನಮ್ಮ ನಡುವೆ ಮೌನ ಮಾತ್ರ ಮನೆ ಮಾಡಿತ್ತು.
 ನಿನ್ನ ಮನೆ ಹತ್ತಿರದ ಕ್ರಾಸ್ ನಲ್ಲಿ ನೀನು ಬೈಕ್ ನಿಂದ ಇಳಿದೆ. ಅದು ನಿನ್ನ ಡ್ರಾಪ್ ಮಾಡೋ ಮಾಮೂಲಿ ಜಾಗ. ಆದರೆ ನೀನು ಇವತ್ತು ಬರಿ ನನ್ನ ಬೈಕ್ ನಿಂದ ಮಾತ್ರ ಅಲ್ಲ, ನನ್ನ life ನಿಂದಲೇ ಇಳಿದು, ಎದ್ದು ಹೋಗ್ಬಿಟ್ಟೆ.

(ವಿ. ಸೂ. : ಆತ್ಮೀಯ ಓದುಗ ಮಿತ್ರರೇ, ಇದು ಕೇವಲ ಕಾಲ್ಪನಿಕ ಕಥೆ ಅಷ್ಟೇ. ನಾನು ಭಗ್ನ ಪ್ರೇಮಿಯು  ಅಲ್ಲ. ಮನದೆನ್ನೆಯು ನನಗಿಲ್ಲ.)

No comments:

Post a Comment