Thursday, August 5, 2010

ಪುಟ ತೆರೆಯುವ ಮುನ್ನ.



ನಂಗೆ ಈ ಬ್ಲಾಗ್  ಬರಯೋಕೆ ಸ್ಫೂರ್ತಿ ಆದವರು ಇಬ್ರು ಅಂತ ಹೇಳಿದ್ನಲ್ವ? ಅದರಲ್ಲಿ ಒಬ್ರು, ಸೌಮ್ಯ B ಅಂತ. ಊರು ಹೊನ್ನಾವರದ ಹತ್ತಿರ.  ಮಂಗಳೂರಿನಲ್ಲಿ B.E. ಮಾಡ್ತಿದಾಳೆ. ಅವರೇ ಹೇಳ್ಕೊಂಡಿದ್ರು, ಮಾಡ್ತಿರೋದು ಬಿ ಇ  ಆದರು ಸಾಹಿತ್ಯದೆಡೆಗೆ ಒಲವು ಅಂತ. ಅವ್ರ ಬ್ಲಾಗ್ ನಾನು ಓದ್ತಿದ್ದೆ ಹಾಗು comment ಹಾಕ್ತಿದ್ದೆ. ಒಂದಿನ ಆರ್ಕುಟ್ ನಲ್ಲಿ ಆನ್ ಲೈನ್ ಇದ್ದಾಗ ನಾನು ಹಾಕಿರೋ comment ಗೆ  'ಥ್ಯಾಂಕ್ಸ್ ವಿನಯಣ್ಣ' ಅಂತ ಹೇಳಿದ್ಲು. ನನಗೋ ಈ ತಂಗಿ ಅನ್ನೋ relationship ಗೆ ತುಂಬಾ ಗೌರವ ಮತ್ತು ಪ್ರೀತಿ. ಯಾಕೆ ಅಂದ್ರೆ ನಂಗೆ ಸ್ವಂತ ತಂಗಿ ಇಲ್ಲ.  ಅಣ್ಣ ಅನ್ನೋ ಮೂಲಕ ನನ್ನ ಮನಸಿನ ಮನೆ ತುಂಬಿದಳು. ಸೌಮ್ಯ ತುಂಬಾ ಚೆನ್ನಾಗಿ  ಬರಿತಾಳೆ ಹಾಗು ಅವಳ busy schedule ನಡುವೆ ಸ್ವಲ್ಪ ಸಮಯ ವ್ಯಯಿಸಿ ಎಷ್ಟೆಲ್ಲ ಬರಿತಾಳೆ ಹಾಗಿದ್ರೆ ನನಗೆ ಸಮಯ ಇದ್ದೆ ಇರತ್ತೆ ನಾನು ಯಾಕೆ ಬ್ಲಾಗ್ ಬರಿಬಾರ್ದು ಅನ್ಕೊಂಡೆ. ನನಗಂತೂ ಕಥೆ, ಕವನ ಬರಿಯೋಕೆ ಬರಲ್ಲ. ನನ್ನ ಜೀವನದ ಘಟನೆಗಳನ್ನೇ ಬರಿಯೋದು ಅಂತ ತೀರ್ಮಾನ ತಗೊಂಡೆ. 

ಇನ್ನೊಬ್ರು ನಮ್ಮುರಿನವ್ರೆ ಆದ ಸುಮನಕ್ಕ.  ದೂರದ ಸಂಬಂಧಿ ಕೂಡ. ತುಂಬಾ active person. ಇವರ ಬ್ಲಾಗ್ ಕೂಡ  ಓದ್ತಿದ್ದೆ. ಇವರ ಕೆಲಸ, ಮನೆ ಕೆಲಸ, ಆಫೀಸು  , ಓದೋದು, exam, ಅದು, ಇದು ಅಂತೆಲ್ಲ ತುಂಬಾ ಬ್ಯುಸಿ ಇರೋ ಅಂತ ಪಾರ್ಟಿ. 'ಆದರು ಸುಮನಕ್ಕನೆ ಬರಿತ ನಾನು ಯಾಕೆ try ಮಾಡಬಾರದು' ಅನ್ನ್ನೋ ಹಠದಿಂದನೆ  ಇವತ್ತು ನಿಮ್ಮ ಮುಂದೆ ಇರೋ          " ಮನಸ್ಸು ಮರೆಯುವ ಮೊದಲು" blog  ಹುಟ್ಟಿದ್ದು. ಈ ಎರಡು ಜನ sister ಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

5 comments:

  1. ವಿನಯ್
    ಚೆನ್ನಾಗಿ ಬರದ್ಯೊ..ನಿನ್ನ ಬರವಣಿಗೆ ಹೀಗೆ ಅವಿರತವಾಗಿ ನಡೀತಾ ಇರಲಿ ಅಂತ ಈ ಅಕ್ಕನ ಹಾರೈಕೆ!

    ReplyDelete
  2. chanced upon your blog, chennagi barithira, keep it up.

    ReplyDelete