Monday, August 9, 2010

ಮರುಕಳಿಸಿದ ಕಾಲೇಜು ಜೀವನ..

ಜೂನ್ ತಿಂಗಳಲ್ಲಿ ಒಬ್ಬರ ಜೊತೆ ಮಾತಾಡ್ತಾ ಇದ್ದಾಗ ಅವರು, ನೀನು ಡಿಗ್ರಿ ಮುಗಿಸ್ಕೊಬೇಕಿತ್ತು. ಡಿಗ್ರಿ ಅಂತ ಒಂದು certificate ಇದ್ರೆ ಒಳ್ಳೇದು. ನಿಂಗೆ ಹೇಗೂ ಟೈಮ್ ಇದೆ ಮತ್ತೆ ವಯಸ್ಸು ಕೂಡ ಇದೆ ಡಿಗ್ರಿ ಮಾಡ್ಕೋ ಬಿಡು ಅಂತ ಹೇಳಿದ್ರು. ಟೈಮ್ ಇದೆ ಓಕೆ ಆದರೆ ಓದೋದಕ್ಕೆ ವಯಸ್ಸಿನ ಅಡ್ಡಿ  ಅನ್ನೋದಂತೂ ಇಲ್ಲ  ಅಲ್ವೇ..? (ತಪ್ಪು ನಂದೇ ಆಗ ಡಿಗ್ರಿ  ಮಾಡು ಅಂತ ಎಲ್ರು ಹೇಳಿದ್ರು ಆದ್ರೆ ನಾನು neglect ಮಾಡ್ದೆ. diploma base ನಲ್ಲೆ ಕೆಲಸ ಮಾಡ್ತೀನಿ ಅನ್ನೋ ಹುಂಬತನ)  ಸರಿ ಡಿಗ್ರಿ ಮಾಡೇ ಬಿಡೋಣ ಅಂತ ತೀರ್ಮಾನ ಮಾಡಿ,  ಈ ವಿಷಯನ ನನ್ನ ಕೆಲವೇ ಕೆಲವು ಆತ್ಮೀಯ ಗೆಳೆಯರು ಹಾಗು ಅಪ್ಪ ಅಮ್ಮ ಜೊತೆ ಹೇಳ್ದೆ. ನನ್ನಪ್ಪಗಂತು ತುಂಬಾ ಖುಷಿ ಆಯ್ತು. ಇನ್ನು ಫ್ರೆಂಡ್ಸ್ ಜೊತೆ correspondence  ನಲ್ಲಿ ಡಿಗ್ರಿ ಮಾಡ್ತಿನ್ರೋ ಅಂತ ಹೇಳ್ದೆ. ಅದ್ಕೆ ಅವ್ರು ಬೈದು ಹಾಗೆ ಮಾಡೋ ಹಾಗಿದ್ರೆ ಡಿಗ್ರಿ ಮಾಡ್ಲೇ ಬೇಡ, ಅದಕ್ಕೆ ವ್ಯಾಲ್ಯುನೆ ಇಲ್ಲ. ಈಗ ನಿನಗೇನು ಕಡಮೆ ಆಗಿಲ್ವಲ್ಲ ಅಂತ ಹೇಳಿದ್ರು. ನೀನು ಹೇಗೂ ಸಂಜೆ ಫ್ರೀ ಇರ್ತಿಯ evening collage ಗೆ ಸೇರ್ಕೋ ಅಂದ್ರು .  ನನ್ನ ಗೆಳತಿ ಒಬ್ಳು ಒಂದನೇ ಕ್ಲಾಸಿನಿಂದ ಇದುವರೆಗೂ ಓದ್ತಾನೆ ಇದಾಳೆ ಈಗ  26 ವರ್ಷ ಅವಳಿಗೆ. (ವರ್ಷದ ಲೆಕ್ಕದಲ್ಲಾದ್ರೆ   ಈಗ ಅವಳು  21 ನೇ ಕ್ಲಾಸು..!!)  ಎರೆಡು ವಿಷಯದಲ್ಲಿ M.A ಮುಗ್ಸಿದಾಳೆ. ಆದರು ಓದೋದನ್ನು ನಿಲ್ಸಿಲ್ಲ. ಸಧ್ಯಕ್ಕೆ ಕುಮುಟ ಕಾಲೇಜಿನಲ್ಲಿ ಪ್ಯಾಧ್ಯಪಕಿ. ಇನ್ನೊಬ್ರು  ಬೆಂಗಳೂರಿನಲ್ಲೇ school teacher . ಇವರಿಬ್ಬರ  ಒಳ್ಳೆ ಸಲಹೆ, ಸೂಚನೆ, ಪ್ರೋತ್ಸಾಹ ಹಾಗೂ ಕುಟುಂಬದವರ ಹಾರೈಕೆ (ನನ್ನ ಒಬ್ಬಳು ಅಕ್ಕ  ನನಗೆ ಕಾಲೇಜು ಹೋಗೋಕೆ ಧೈರ್ಯ ತುಂಬಿದ್ಲು ಹಾಗೆ ಕಾಲೇಜಿನ ಫೀಸ್ ಕೂಡ ಕೊಟ್ಟು ನಿಂಗೆ ಆದಾಗ ವಾಪಸ್ ಕೊಡು, ಓದೋ ವಿಷಯಕ್ಕೆ ದುಡ್ಡಿನ ವಿಷಯದಲ್ಲಿ ಸಂಕೋಚ ಮಾಡ್ಕೋಬೇಡ  ಅಂತ ಹೇಳಿದ್ಲು ಅವಳ ಹೆಸರು ಪ್ರಭಕ್ಕ ಅಂತ. ಈಗ PhD ಮಾಡ್ತಿದಾಳೆ.) ಗೆಳೆಯರ ಬೆಂಬಲ (ಒತ್ತಾಯ) ದಿಂದ  ನಾನು ಕೂಡ evening ಕಾಲೇಜಿಗೆ  ಸೇರಿದ್ದಾಯ್ತು.

ಮೊನ್ನೆ ಒಬ್ರಿಗೆ ಫೋನ್ ಮಾಡಿದ್ದೆ. ಆಗ ಅವ್ರು Saturday &  Sunday ಹೇಗೂ ನಿಮಗೆ ರಜೆ ಇರತ್ತೆ  ಫ್ರೀ ಇರ್ತೀರಲ್ಲ ಮನೆಗೆ ಬನ್ನಿ, ತುಂಬಾ ದಿನ ಆಯ್ತು ಬಂದೆ ಇಲ್ಲ ಅಂತ ಹೇಳಿದ್ರು. ಅದಕ್ಕೆ ನಾನು ಈಗ ಫ್ರೀ ಇರಲ್ಲ ಸಂಜೆ ಕ್ಲಾಸ್ ಇರತ್ತೆ ಹೀಗೆ ಕಾಲೇಜಿಗೆ ಸೇರಿದೀನಿ ಅಂತ ಹೇಳ್ದೆ.
ಅದಕ್ಕೆ ಅವ್ರು ಗೇಲಿ ಮಾಡ್ಕೊಂಡು, ನಗ್ತಾ, 'ಈಗ ಇದೆಲ್ಲ ನಿಮಗೆ ಬೇಕಿತ್ತಾ ಅಂತ ಕೇಳಿದ್ರು'. I did not expect that answer.  ಆ ವ್ಯಕ್ತಿ ಗೆ ನಾನು ಯಾವಾಗ್ಲೂ hurt ಆಗೋ ಹಾಗೆ ಮಾತಾಡಿಲ್ಲ. ತುಂಬಾ ಗೌರವದಿಂದ ನೋಡ್ತಿದ್ದೆ.  ಓದೋ ವಿಚಾರದಲ್ಲಿ 1st time ಈ ರೀತಿ ನೆಗೆಟಿವ್ ಮಾತು ಕೇಳ್ತಾ ಇರೋದು. encourage ಮಾದಡಿದ್ರು ಪರವಾಗಿಲ್ಲ, discourage ಮಾಡೋಕೆ ಹೋಗಬಾರದು ಅಲ್ವಾ?
ಹಾಗಂತ ನನಗೇನು ಕೆಲಸ ಇಲ್ಲ ,  ಓದು ಇಲ್ಲ  ಅಂತಲ್ಲ. ಡಿಪ್ಲೋಮಾ ಆಗಿದೆ, ನನ್ನ ಉದ್ಯೋಗ ಕ್ಷೇತ್ರದಲ್ಲೇ  ಬೇಕಾದಷ್ಟು certificate ಮುಗ್ಸಿದೀನಿ. ಹಾಗೆ  ಡಿಗ್ರಿ ಸರ್ಟಿಫಿಕೆಟ್ ತೆಗೆದು ಕೊಳ್ಳೋ ಹಾಗಿದ್ರೆ ದುಡ್ಡಿಗೆ ತಗೊಬಹುದಿತ್ತು. ಆದರೆ ಕಾಲೇಜಿಗೆ ಹೋಗ್ಬೇಕು ಸ್ಟೂಡೆಂಟ್ ಲೈಫ್ ಎಂಜಾಯ್ ಮಾಡ್ತಾ ಡಿಗ್ರಿ ಮಾಡಲೇ ಬೇಕು ಅದಕ್ಕೆ  ಓದ್ತಿದೀನಿ ಅಷ್ಟೇ.

ಹೊಸ ಗೆಳೆಯ, ಗೆಳತಿಯರು. ಎಲ್ಲರೂ ದಿನದ ಸಮಯದಲ್ಲಿ ಉದ್ಯೋಗಸ್ಥರು, ಸಂಜೆ ವಿದ್ಯಾರ್ಥಿಗಳು. ಬೇರೆ, ಬೇರೆ ಕ್ಷೇತ್ರದಲ್ಲಿ ಪರಿಣಿತರಿದಾರೆ  ಅವರೊಂದಿಗೆ ವಿಚಾರ ವಿನಿಮಯ, ಕಾಲೇಜು ಮೋಜು, ಮಸ್ತಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸೋದು ಹೀಗೆ ಕಾಲೇಜು ಜೀವನ  ನಡೀತಾ ಇದೆ.

2 comments:

  1. ಕಲಿಯುವುದು ಒಂದು ನಿರಂತರ ಕ್ರಿಯೆ..ಅದರಲ್ಲೂ ಮತ್ತೆ ಕಾಲೇಜು ಜೀವನಕ್ಕೆ ಮರಳಿದ್ದೀಯಾ ಅಂದ್ರೆ..ಖುಷಿ ಆಯ್ತು! ನಾನು ಮೊನ್ನೆ ಮೊನ್ನೆ ಪರೀಕ್ಷೆ ಕೊಟ್ಟಿದ್ದು ಹೇಳಿದ್ದೆ ಅಲ್ವಾ??? ಬೇರೆಯವರ ಪ್ರತಿಕ್ರಿಯೆಗಳಿಗೆ ಉಬ್ಬಬೇಡ..ತಗ್ಗಲುಬೇಡ..
    ಉಬ್ಬದೆಯೆ ತಗ್ಗದೆಯೇ ನುಗ್ಗಿ ನಡೆ ಮುಂದೆ!!!

    ReplyDelete