Thursday, August 26, 2010

Friendship...

      

 Friendship is a Golden chain between Two Hearts. Sharing 8 Feelings.
 Love, Sad, Happy, Truth, Faith, Secrete, Help and Feels. 

          ಮೊನ್ನೆ ನನ್ನ ಕ್ಲಾಸ್ ಮೇಟ್ಸ್  ಕೇಳ್ತಾ ಇದ್ರು, ಏನೋ ಮಗಾ ಯಾರೋ ನಿನ್ 'Girl Friend' ಅಂತ. ಅದಕ್ಕೆ ನನ್ ಹೇಳ್ದೆ,  ಅವರೆಲ್ಲರೂ ನನ್ ಫ್ರೆಂಡ್ಸ್ ಕಣ್ರೋ ಅಂತ ಹೇಳ್ದೆ. ಆಗ ಹಾಗಲ್ವೋ  ಯಾರಿಗೆ 'ಕಾಳು' ಹಾಕಿದೀಯ? ? ಎಲ್ಲಾ ಹುಡ್ಗೀರ ಜೋತೆನು ಮಾತಾಡ್ತೀಯ, ಮೊನ್ನೆ ಒಬ್ಳನ್ನ ಅವಳ ಮನೆಗೆ ಡ್ರಾಪ್ ಮಾಡಿ ಬಂದೆ, ಬೇರೆ ಹುಡ್ಗೀರೆಲ್ಲ ವರಲಕ್ಷ್ಮಿ ಹಬ್ಬಕ್ಕೆ, ಓಣಂ ಮಾಡಿರೋ  ಒಬ್ಬಟ್ಟು, ಸ್ವೀಟ್ಸ್ ತಂದು ಕೊಟ್ರು  ನಮಗೆ ಯಾರಿಗೂ ಕೊಟ್ಟಿಲ್ಲ. ಅವ್ರು ನಿಂಗೆ ರಾಖಿ ಕಟ್ಟಿಲ್ಲ. ರಾಖಿಯಿಂದ ತಪ್ಪಿಸ್ಕೊಳ್ಳೋಕೆ ಎಷ್ಟೋ ಜನ ಕಾಲೇಜಿಗೆ ಬಂದಿಲ್ಲ ಆದ್ರೆ ನೀನು ಮಾತ್ರ ಅವ್ರ ಜೊತೇನೆ ಆರಾಮಾಗಿ ಇದ್ದೆ. ಏನ್ ವಿಷ್ಯ ಮಗಾ??' ಹೀಗೆ ಇನ್ನು ಹತ್ತು ಹಲವಾರು ಪ್ರಶ್ನೆಗಳು ಹಾಗು Doubts ನಮ್ಮ ಹುಡುಗರಿಗೆ...

            ಹಾಗಂತ ನಾನೇನು ಯಾವುದೇ ಹುಡುಗಿ ಜೊತೆ ಕತ್ತಲಿನ ಮೂಲೆಯಲ್ಲಿ ಗುಪ್ತ್ ಗುಪ್ತ್ ಆಗೇನು ಮಾತಾಡೋದಿಲ್ಲ. ಎಲ್ಲರ ಎದುರೆ ಮಾತಾಡ್ತೀನಿ, ಎಲ್ಲರೂ ಇದ್ದಾಗಲೇ ಕ್ಯಾಂಟೀನ್ ಗೆ ಹೋಗ್ತೀವಿ. ಒಂದು ಹುಡುಗಿ ಜೊತೆ ಮಾತಾಡಿದ್ರೆ, ಒಬ್ಬಳು urgent ಮನೆಗೆ ಹೋಗ್ಬೇಕು ನನ್ನ ಮನೆಗೆ ಬಿಡು ಅಂತ ಹೇಳಿದ್ಕೆ ಮನೆಗೆ ಬಿಟ್ರೆ, (ನಾನು ನಮ್ಮನೆಗೆ ಹೋಗುವಾಗ ಇವಳ ಮನೆ cross ಮಾಡ್ಕೊಂಡೆ ಹೋಗ್ಬೇಕು) ಕಾಫಿ ಕುಡಿಯೋಕೆ ಹೋದ್ರೆ, ಮನೆಯಿಂದ ಸ್ವೀಟ್ಸ್ ತಂದು ಕೊಟ್ಟ ಮಾತ್ರಕ್ಕೆ ನಮ್ಮ  ಸ್ನೇಹಕ್ಕೆ ಬೇರೆ ರೀತಿಯಾದ ಅರ್ಥ ಹುಟ್ಟಿಕೊಳ್ಳತ್ತೆ ಅಂತ ನಾನು ಯೋಚಿಸಿರಲಿಲ್ಲ. ಅದು ಈಗಿನ ಕಾಲದಲ್ಲಿ...!!
            
             ಕಾಲೇಜಿನಲ್ಲಿ ಮಾತ್ರ ಅಲ್ಲ ನನಗೆ ಹೊರಗಡೆ ಕೂಡಾ ತುಂಬಾ ಗೆಳತಿಯರಿದ್ದಾರೆ. ಫೋನ್ ಮಾಡಿ ಗಂಟೆಗಟ್ಟಲೆ ಮಾತಾಡ್ತೀನಿ, ಗಾಂಧೀ ಬಜಾರ್ ನಲ್ಲಿ ಒಬ್ಬಳು ಫ್ರೆಂಡ್ ಜೊತೆ ಸುತ್ತಾಡ್ತೀನಿ, ಒಬ್ಬಳ ಜೊತೆ ಹೋಟೆಲ್ ಗೆ ಊಟಕ್ಕೆ ಹೋಗ್ತೀನಿ, ಪಾರ್ಕ್ ನಲ್ಲಿ  ಕುಳಿತು  ಮಾತಾಡ್ತೀವಿ, ಚಾಟ್ ಮಾಡ್ತಾ ಇರ್ತೀನಿ. ಹೀಗೆಲ್ಲ ಇದ್ರು ನನಗೆ ಒಮ್ಮೆ ಕೂಡ 'ಇವಳಿಗೆ propose ಮಾಡೋಣ, ಇವಳೇ ನನ್ನ life partner' ಅಂತ ಅನಿಸಲೇ ಇಲ್ಲ. ನಾನು ಒಂದು ಹುಡ್ಗೀನ ನೋಡೋ ದೃಷ್ಟಿ ಹಾಗು ಸ್ನೇಹಕ್ಕೆ ಕೊಡುವ  ಗೌರವ ಇದಕ್ಕೆ ಕಾರಣ ಅನ್ಕೋತೀನಿ.

              ನಿನ್ನೆ ನನ್ ಕ್ಲಾಸ್ ಮೇಟ್ ಹೇಳಿದ್ಲು ನಾನು ನಿನ್ ಜೊತೆ ಬರಲ್ಲ ಬೇರೆಯವರೆಲ್ಲ ಏನೇನೊ ಮಾತಾಡಿಕೊಳ್ತಾರೆ ಅಂತ. ಆದರೆ ನಾನು, ಅವಳು ಜಸ್ಟ್ ಬೆಸ್ಟ್ ಫ್ರೆಂಡ್ಸ್ ಅಷ್ಟೇ. ನಮ್ಮಿಬ್ಬರ ಮಧ್ಯೆ ಬೇರೇನೂ ಇಲ್ಲ. ಇದು ನಮಗೆ ಗೊತ್ತು ಆದರೆ ತಪ್ಪು ಅರ್ಥ ಕಲ್ಪಿಸಿಕೊಳ್ಳುವ ವಿಕೃತ ಮನಸ್ಸಿನವರಿಗೆ ಗೊತ್ತಾಗಲ್ಲ. ಒಂದು ಹುಡುಗ ಮತ್ತು ಒಂದು ಹುಡುಗಿ ಮಧ್ಯೆ ಇರುವ ಸಂಭಂಧ ಅವರಿಬ್ಬರಿಗೆ ಮಾತ್ರ ಗೊತ್ತಿರತ್ತೆ. ಅದಕ್ಕೆ ಉಪ್ಪು, ಖಾರ ಹಾಕಿ ಸ್ನೇಹ, ಸಂಭಂಧದ ಅರ್ಥನೇ ಹಾಳು ಮಾಡ್ತಾರೆ. ಅಣ್ಣ, ತಂಗಿ ಒಟ್ಟಿಗೆ ಹೋದರು ತಪ್ಪು ತಿಳಿದುಕೊಳ್ಳುವ ಜನ ಇದಾರೆ...!!

No comments:

Post a Comment