Wednesday, September 22, 2010

ಗರಿಗೆದರಿದ ನೆನಪು..

ಮೊನ್ನೆ ಹಬ್ಬಕ್ಕೆ ಅಂತ ಊರಿಗೆ ಹೋದಾಗ ಮನಸ್ಸಿನಲ್ಲಿ ಕೆಲವು ಹಳೆಯ ನೆನಪುಗಳು ಬಿಚ್ಚಿಕೊಂಡವು. ನನ್ನ ತಮ್ಮ, ಅಣ್ಣ ನಾನು 'ಕ್ರಿಕೆಟ್ ಆಡೋಕೆ ಹೊರಟೆ' ಅಂತ ಹೇಳ್ದ. ಕ್ರಿಕೆಟ್ ಬಿಟ್ಟು ಬೇರೆ ಯಾವ ಆಟ ಆಡ್ತಿರ ಅಂತ ಕೇಳ್ದೆ. ಸ್ಕೂಲಲ್ಲಿ ಬ್ಯಾಡ್ಮಿಂಟನ್, ವಾಲಿಬಾಲ್ ರಜೆ ಇದ್ದಾಗ ಕ್ರಿಕೆಟ್ ಆಡ್ತೀವಿ ಅಂತ ಹೇಳ್ದ. ಬೇರೆ ಯಾವ ಆಟಾನೂ ಆಡಲ್ವ ಅಂತ ಕೇಳಿದ್ರೆ 'ಇಲ್ಲ' ಅಂತ ಚುಟುಕಾಗಿ ಉತ್ತರಿಸಿದ.  ಈಗಿನ ಹುಡುಗರಿಗೆ ಈ ಕ್ರಿಕೆಟ್ ಬಿಟ್ಟು ಬೇರೆ ಹಳ್ಳಿ ಆಟಗಳು ಗೊತ್ತೇ ಇಲ್ಲ ಅನ್ಸತ್ತೆ..!!

ಅದೇ ನಾವು ಚಿಕ್ಕವರಿದ್ದಾಗ, ನನ್ನ ಊರಿನ ಬೇರೆ ಗೆಳೆಯ/ಗೆಳತಿಯರೊಂದಿಗೆ ಕ್ರಿಕೆಟ್ ಜೊತೆಗೆ ಕಣ್ಣಾಮುಚ್ಚಾಲೆ, ಉಪ್ಪಾಟ, ಚರಾಪ್, ಕಲ್ಲು ತೆಗಿಯೋ ಆಟ, ಮರ ಕೋತಿ, ಚಿನ್ನಿ ದಾಂಡು, ಕಂಬ ಕಂಬದ ಆಟ ಇವೆಲ್ಲ ಔಟ್ ಡೋರ್ ಆಟಗಳಾದ್ರೆ, ಮಳೆಗಾಲದಲ್ಲಿ (Indoor games)  ಬಳೆಚೂರುಗಳಲ್ಲಿ  ಸೆಟ್ ಆಟ, ಹಿಡಿ (ಪೊರಕೆ) ಕಡ್ಡಿಗಳನ್ನು ಕಟ್ ಮಾಡಿ ಅದರಿಂದ ಕಡ್ಡಿ ತೆಗೆಯೋ ಆಟ, ಚೀಟಿ ಆಟ, ಚನ್ನೆ ಮಣೆ  ಅಬ್ಬಾ ಹೀಗೆ ಎಷ್ಟೊಂದು ಆಟಗಳು. ಇನ್ನೊಂದು ಅಂದ್ರೆ ಸೈಕಲ್ ಹೊಡಿಯೋದು. ಆದರೆ ಈಗಿನ ಮಕ್ಕಳಿಗೆ ಇದ್ಯಾವುದರಲ್ಲೂ ಇಂಟರೆಸ್ಟ್ ಇಲ್ಲ.

ಆಗ ರಜೆ ಬಂತು ಅಂದ್ರೆ ನಮ್ಮೂರಿಗೆ ಅಜ್ಜನ ಮನೆಗೆ ಬರುತ್ತಿದ್ದವರು ಕೂಡ ಜಾಸ್ತಿ ಇದ್ರು. ಈಗ ರಜೆ ಬಂತು ಅಂದ್ರೆ ಸಮ್ಮರ್ ಕ್ಯಾಂಪ್, ಕಂಪ್ಯೂಟರ್ ಕ್ಲಾಸ್ ಅಂತ ಹೋಗ್ತಾರೆ ಹೊರತು, ಅಜ್ಜನ ಮನೆಯ ರಜದ ಮೋಜು ಈಗಿನ ಮಕ್ಕಳಿಗೆ ಸಿಗ್ತಿಲ್ಲ ಅನ್ಕೋತೀನಿ. ಈಗ ಆ ನನ್ನ ಹಲವು ಗೆಳೆಯ/ ಗೆಳತಿಯರಿಗೆ ಮದುವೆ ಆಗಿ ಸಂಸಾರವೆಂಬ ಸಾಗರದಲ್ಲಿ ಮುಳುಗಿದ್ದಾರೆ.  ಇನ್ನು ಕೆಲವರು ಹೆಚ್ಚಿನ ವಿದ್ಯಾಭ್ಯಾಸ  ಹಾಗು ಉತ್ತಮ ಕೆಲಸಕ್ಕೋಸ್ಕರ ಬೇರೆ ಬೇರೆ ಊರುಗಳಲ್ಲಿ ನೆಲಸಿದ್ದಾರೆ. ಈಗ ಊರಿಗೆ ಹೋದರೆ ಮೊದಲಿನ ಹಾಗೆ ಓರಿಗೆಯ ಗೆಳಯ, ಗೆಳತಿಯರು ಸಿಗಲ್ಲ.

ನನಗಂತೂ ಈ ಬೆಂದಕಾಳೂರಿನ ಜೀವನದ ಜಂಜಾಟದಲ್ಲಿ ಅಜ್ಜನ ಮನೆಯ ಹಾದಿಯೇ ಮರೆತ ಹಾಗಿದೆ. ಮೊನ್ನೆ ಅಷ್ಟಮಿ ಹಬ್ಬಕ್ಕೆ ಬಂದ ಮಾವ 'ನೀನು ನಮ್ಮ ಮನೆಗೆ ಬಂದರೆ ಮಾತ್ರ ಇನ್ನು ನಾವು ನಿಮ್ಮ ಮನೆಗೆ  ಬರ್ತೀವಿ. ನಿನನಗೆ ಬೇರೆ ಎಲ್ಲಾ ಕಡೆ ಹೋಗೋಕೆ ಆಗತ್ತೆ, ಅಜ್ಜನ ಮನೆ ನೆನಪು ಇರಲ್ಲ ಅಲ್ವಾ?' ಅಂತ ಹೇಳಿ, ನನಗೆ ಪ್ರೀತಿಯಿಂದ ಗದರಿಸಿ ಹೋದರು. ಅವರು ಹೇಳಿದ್ದು ನಿಜ ಅನಿಸ್ತು. ಅದಕ್ಕೆ   ಸಧ್ಯದಲ್ಲೇ ಒಂದು ವಾರ ಕೆಲಸಕ್ಕೆ ರಜೆ ಹಾಕಿ ಅಜ್ಜನ ಮನೆಗೆ ಹೋಗೋ ಪ್ಲಾನ್ ಹಾಕಿದೀನಿ. ಮೊಬೈಲ್, ಇಂಟರ್ನೆಟ್ ಅಂತ ಯಾವುದರ ಚಿಂತೆ ಇಲ್ಲದೆ ಎಲ್ಲಾ ಮರೆತು ಹಾಯಾಗಿ ಕಾಲ ಕಳೆಯಬೇಕು ಅಂತಿದೀನಿ.

ಇದನ್ನ ಓದುತ್ತಿರುವ ನೀವು ಕೂಡ ಈ ಹಳ್ಳಿ ಆಟಗಳನ್ನೆಲ್ಲ ಆಡಿದೀರಿ ಅನ್ಕೋತೀನಿ. ಈಗ ಎಷ್ಟೇ ಇಷಾರಾಮಿ ಜೀವನ ಇದ್ರು, ವೀಡಿಯೊ ಗೇಮ್ಸ್ ಇದ್ರು ಆಗ ಸಿಗುತ್ತಿದ್ದ ಖುಷಿ  ಈಗ ಸಿಗಲ್ಲ. ಆಟ ಆಡುವಾಗ ಬಿದ್ದು ಗಾಯ ಮಾಡ್ಕೊಂಡು, ಮನೆಗೆ ಹೋಗಿ ಬೈಸಿಕೊಂಡಿದ್ದು ಇದನ್ನೆಲ್ಲ ನೆನಪು ಮಾಡ್ಕೊಂಡ್ರೆ ಈಗಲೂ ಮುಖದಲ್ಲಿ ಮಂದಹಾಸ ಮೂಡತ್ತೆ.   

7 comments:

 1. Hi nice you made us to remember all our childhood days back with your writing.

  ReplyDelete
 2. hey!! what a way to start your blog? dude!! keep up the good work, to be honest even i had forgotten few movements of my childhood but thanx a ton to you you made me to recollect...

  ReplyDelete
 3. there's one more thing noticed on your blog is, i mean the structure or the back ground pitcher should have been your home town pic or more better pics, try to upload the pics when you write a blog so that we get an how it would have been, we can imagine and more over looks pretty colorful

  ReplyDelete
 4. Chennagi bareethe Vinay.
  keep it up.

  ReplyDelete
 5. Hey Ramya... wt a surprise..!! Tanx.. Tanx a lot.. neenu channgi baradde..

  ReplyDelete