Thursday, December 16, 2010

ತಿರುಪತಿ ಪ್ರವಾಸ...

Last week ನಲ್ಲಿ ನಾವು 12 ಜನ friends ವೆಲ್ಲೂರು ಮತ್ತು ತಿರುಪತಿ ಟ್ರಿಪ್ ಹೋಗಿದ್ವಿ. ನಮ್ಮದೇ ಆದ ಬ್ಯಾಚ್ ನಿಂದ 7 ಹಾಗು ಬೇರೆ 5 ಜನ ಹೋಗಿದ್ವಿ.[( 7- Ashwin, Me, Jisha, Manasa, Chandrika, Jyothi, Vikram) ( 5-Teju, Kokila, Manoj, Shashi, Shyam)] ನಾನಂತೂ ಎಷ್ಟೋ ವರ್ಷದ ನಂತರ ಹೀಗೆ ಫ್ರೆಂಡ್ಸ್ ಜೊತೆ ರೈಲಿನಲ್ಲಿ ಟ್ರಿಪ್ ಹೊರಟಿರೋದು. ಯಾವಾಗ್ಲೂ ನಾನು ಕಾರಿನಲ್ಲಿ ಅಥವಾ ಬೇರೆ ವೆಹಿಕಲ್ ಅಥವಾ ಬೈಕಿನಲ್ಲಿ ಊರು ಸುತ್ತೋಕೆ ಹೋಗೋದು ವಾಡಿಕೆ. ಆದರೆ ಈ ಬಾರಿ ನಾನು ರೈಲಿನಲ್ಲಿ ಹೋಗಿದ್ದು ವಿಶೇಷ. ಹಾಗಂತ ಇವರು ಯಾರೂ ನನ್ನ ಚೆಡ್ಡಿ ದೋಸ್ತ್ ಗಳಲ್ಲ. ಕೆಲವೇ ತಿಂಗಳುಗಳ ಹಿಂದೆ ಆದ ಪರಿಚಯ, ಗಾಢವಾಗಿ ಬೆಳೆದ ಸ್ನೇಹ,  10 ಜನರ ನಮ್ಮದೇ ಆದ ಒಂದು ಟೀಂ. ನಮ್ಮ ಟೀಂ ನಲ್ಲಿ 3 ಜನ ಕಾರಣಾಂತರಗಳಿಂದ ಈ ಟ್ರಿಪ್ ಗೆ ಬಂದಿಲ್ಲ. ನಾವು ತುಂಬಾ ಮಿಸ್ ಮಾಡ್ಕೊಂದ್ವಿ. ಹಾಗೆ ಅಲ್ಲಿನ ಫೋಟೋಸ್ ಹಾಗು ನಮ್ಮ  enjoyment ಕಥೆ ಕೇಳಿ  ಅವರೇ ತುಂಬಾ ಬೇಜಾರ್ ಮಾಡಿಕೊಂಡರು.

ಹೊರಡುವ ದಿನ (ಶನಿವಾರ) ಬೆಳಗಿನ ಜಾವ 4 ಗಂಟೆಗೆ ಎದ್ದು ಎಲ್ಲರಿಗೂ ಫೋನಾಯಿಸಿ ಎಲ್ಲರೂ ಎದ್ದಿದ್ದಾರೆ ಅಂತ ಖಚಿತ ಆದ್ಮೇಲೆ ನಾನು ಎದ್ದು ಸ್ನಾನ ಮಾಡಿ, ರೆಡಿ ಆಗಿ ರೈಲ್ವೆ ಸ್ಟೇಷನ್ ತಲುಪಿದ್ದು 5.30. ಒಬ್ಬೊಬ್ಬರಾಗಿ ಎಲ್ಲರೂ ಬಂದು ಸೇರಿದ್ದು 6 ಗಂಟೆ ಆಯ್ತು. ಚುಮು, ಚುಮು ಚಳಿ. 6.30 ಲಾಲ್ ಬಾಗ್ express ಗೆ ರಿಸರ್ವ್ ಮಾಡ್ಸಿದ್ವಿ. ಟ್ರೈನ್ ಹೊರಟು ಸ್ವಲ್ಪ ಸಮಯಕ್ಕೆ ಹಸಿವು ಅಂತ ಬ್ರೆಡ್ ಮತ್ತು ಜಾಮ್ ಹೊಟ್ಟೆಗೆ ಇಳ್ಸಿದ್ವಿ. ಮಾತು, ಮಾತು, ಮಾತು... ಒಬ್ಬಬ್ಬೊರನ್ನು ರೆಗಿಸ್ಕೋತ ಅಂತ್ಯಾಕ್ಷರಿ ಆಡ್ಕೋತ ಸಮಯ ಹೋಗಿದ್ದೆ ಗೊತ್ತಾಗಿಲ್ಲ. ಅಷ್ಟರಲ್ಲಿ ನಾವು  ಇಳಿಯೋ ಸ್ಟೇಷನ್ ಬಂದಾಗಿತ್ತು. (ಕಾಟಪಾಡಿ)  ಇಲ್ಲಿಂದ ವೆಲ್ಲೊರು ಗೋಲ್ಡನ್ ಟೆಂಪಲ್ ಗೆ ಹೊರಟ್ವಿ. ಗೋಲ್ಡನ್ ಟೆಂಪಲ್ ಹಾಗು ಅಲ್ಲಿನ infrastructure ಅದ್ಭುತವಾಗಿದೆ. ದೇವಸ್ಥಾನದ ತೀರ್ಥದ ಕೊಳಕ್ಕೆ ಭಕ್ತರು  ಚಿಲ್ಲರೆ (coin) ಹಾಕೋದೆ ಎಲ್ಲರೂ ನೋಡಿರ್ತೀರ, ಆದರೆ ಇಲ್ಲಿ ಬರುವ ಭಕ್ತಾದಿಗಳು ಇನ್ನು ಒಂದು ಸ್ಟೆಪ್ ಮುಂದೆ ಹೋಗಿ Credit & Debit Card ಗಳನ್ನೇ ತೀರ್ಥದ ಕೊಳಕ್ಕೆ ಹಾಕಿದಾರೆ.  ದೇವರು ಕೂಡ ಇನ್ಮೇಲೆ swiping machine ತಗೋಬೇಕು ಅಂತಾಯ್ತು.!! ಟೆಂಪಲ್ ನೋಡ್ಕೊಂಡು, ಊಟ ಮಾಡಿ, ವೆಲ್ಲೊರು ಕೋಟೆ (fort) ನೋಡೋಕೆ ಬಂದ್ವಿ  ಕೋಟೆ ಸುತ್ತಲು ನಡೆದು, ನಡೆದು ಸುಸ್ತಾಗೊಯ್ತು ಎಲ್ಲರಿಗೂ. ಅಷ್ಟರಲ್ಲೇ ಸಂಜೆ ಆಯ್ತು. ಅಲ್ಲಿಂದ ಸೀದಾ ತಿರುಪತಿ ಬಸ್ ಹಿಡಿದು ತಿರುಪತಿ ತಲುಪಿದ್ದು 9 ಗಂಟೆ ಆಯ್ತು. ಇಷ್ಟೊತ್ತು ಕಾಲು ನೋವು ಮಾತ್ರ ಇತ್ತು ಈಗ ಭುಜ ಕೂಡ ನೋವಾಗಿತ್ತು, ಕಾರಣ ನನ್ನ ಎರಡು ಭುಜದ ಮೇಲೆ ಇಬ್ರು ತಲೆ ಇಟ್ಟು  ಆರಾಮಾಗಿ ಮಲಗಿ ನಿದ್ರೆ  ಮಾಡಿದ್ರು!!  ತಿರುಪತಿಯಲ್ಲಿ ಟಿ. ಟಿ. ಡಿ. ಗೆಸ್ಟ್ ಹೌಸಿನಲ್ಲಿ  ನಾವು ಮೊದಲೇ ರೂಮುಗಳನ್ನು ಬುಕ್ ಮಾಡಿದ್ರಿಂದ ರೂಂ ಹುಡುಕಿಕೊಂಡು ಅಲೆಯೋದು ಇರಲಿಲ್ಲ. ಊಟಕ್ಕೆ ಒಳ್ಳೆ ಹೋಟೆಲ್ ಹುಡುಕಿಕೊಂಡು ನಡೆದು, ನಡೆದು ಮತ್ತೆ ಸುಸ್ತಾಗೊಯ್ತು. ಊಟ ಮಾಡಿ ಬಂದು ಮಲಗೋದು 11.30 ಆಯ್ತು. ನಾವು 6 ಜನ ಹುಡುಗ್ರು ಇದ್ವಿ. 3 ರೂಮು ತಗೊಂಡಿದ್ವಿ.  3 ಜನ, 3 ಜನ ಹುಡುಗ್ರು 2 ರೂಮಿನಲ್ಲಿದ್ವಿ. ಪಾಪ ನಮ್ಮ ಗೆಳತಿಯರು 6 ಜನ ಒಂದೇ ರೂಮಿನಲ್ಲಿ ಹೊಂದಾಣಿಕೆ (adjust) ಮಾಡಿಕೊಂಡು ಮಲಗಿದರು.

ಮಾರನೆ ದಿನ ಬೆಳಗ್ಗೆ ಅಂದ್ರೆ ಭಾನುವಾರ ಬೆಳಗಿನ ಜಾವ 3 ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ ಹೊರಟ್ವಿ. ಚಳಿ ಬೇರೆ ಸಣ್ಣದಾಗಿ ಮಳೆ ಬೇರೆ ಬರ್ತಾ ಇತ್ತು.  ತಿರುಪತಿಯಿಂದ  ತಿರುಮಲಕ್ಕೆ ಬೆಟ್ಟ ನಡೆದು ಹತ್ತೋದು ಅಂತ ಮೊದಲೆ ಪ್ಲಾನ್ ಮಾಡಿದ್ವಿ. ಬೆಟ್ಟ  ಹತ್ತುವ ಜಾಗಕ್ಕೆ (ಅಳಪಿರಿ) ಬರೋದ್ರಲ್ಲಿ 4.30 ಆಯ್ತು. ಮೊದಲು ಸ್ವಲ್ಪ ಬೆಟ್ಟ ಹತ್ತೋವಾಗ ಎಲ್ಲರಿಗೂ ಫುಲ್ ಜೋಶ್ ಇತ್ತು. ಎಲ್ಲೂ ರೆಸ್ಟ್ ತಗೊಳ್ದೆ ಹತ್ತೋಣ ಅಂತ ಅನ್ಕೊಂಡು  ಶುರು ಮಾಡಿದ್ವಿ. ಆಮೇಲೆ ಸ್ವಲ್ಪ ಸ್ಟೆಪ್ಸ್ ಹತ್ತೋದು, ಕೂರೋದು, ಮಾಡ್ಕೊಂಡು 6.30 ಗೆ  ಗಾಳಿ ಗೋಪುರ (3 ನೇ ಬೆಟ್ಟ) ತಲುಪಿದ್ವಿ. ಅಲ್ಲಿ ದರ್ಶನದ ಟೋಕನ್ ತಗೊಂಡು, ಕಾಫಿ ಕುಡಿದು ಸ್ವಲ್ಪ ಹೊತ್ತು ಆರಾಮಾಗಿ ಕುಳಿತು ಮತ್ತೆ ನಡಿಯೋಕೆ ಶುರು ಮಾಡಿದ್ವಿ. ಚಳಿ ಎಲ್ಲಾ ಓಡಿ ಹೋಗಿ, ಸೆಖೆ ಶುರುವಾಗಿತ್ತು ಬೆಟ್ಟ ಹತ್ತುವಾಗ. ಅಂತೂ ಇಂತೂ 10.30 ಗೆ ತಿರುಮಲ ತಲುಪಿದ್ವಿ. ತಿರುಮಲ ಹೋದವರು ತಿಂಡಿ ತಿನ್ನೋಕೆ ಹೋಟೆಲ್ ಗೆ ಹೋದ್ವಿ. ಅದು ಎಷ್ಟ್ ತಿಂದ್ವಿ, ಹೇಗೆ ತಿಂದ್ವಿ ಅನ್ನೋದು ಇನ್ನು ನಂಗೆ ಸರಿ ಅರ್ಥ ಆಗ್ತಿಲ್ಲ. ಕಾರಣ, ಆರ್ಡರ್ ಮಾಡಿದ್ದನ್ನು ಬೇರರ್ ತಂದಿಟ್ಟು 2 ನಿಮಿಷಕ್ಕೆ ಎಲ್ಲಾ ಖಾಲಿ.!! ಮತ್ತೆ ಆರ್ಡರ್ ಮಾಡೋದು, ಪಾಪ ಆ ಬೇರರ್ ನಮ್ಮನ್ನು ನೋಡಿ  ಎಷ್ಟೋ ದಿನದಿಂದ ಏನೂ ತಿಂದೆ ಇಲ್ವೇನೋ ಅಂತ ಅಂದು ಕೊಂಡಿರ್ತಾನೆ. ಆಮೇಲೆ ದರ್ಶನಕ್ಕೆ ಕ್ಯೂ ನಲ್ಲಿ ನಿಂತ್ವಿ. 12 ಗಂಟೆಗೆ ಹೋಗಿದ್ವಿ, 4 ಗಂಟೆಗೆ ದರ್ಶನ ಆಯ್ತು. ಆ ಟೈಮ್ (4 hour)  ಹೇಗೆ ಪಾಸ್ ಆಯ್ತು ಅಂತಾನೆ ಗೊತ್ತಾಗಿಲ್ಲ. ಬರಿ ಜೋಕ್ಸ್, ನಗು, ನಗು, ನಗು, ಮಾತು, ಮಾತು, ಮಾತು. ಒಬ್ಬಳು ಗೆಳತಿಗಂತೂ  ನಕ್ಕು, ನಕ್ಕು ಹೊಟ್ಟೆ ನೋವು ಬಂತು. ಹುಡ್ಗೀರಿಗೆ ನಗೋಕಾಗದೆ ಎಲ್ಲಾ ಹುಡ್ಗೀರು ಸೇರಿ ನನಗೆ ಚಿವುಟಿ, ಚಿವುಟಿ ನನ್ನ ಕೈ ಊದಿಸಿದ್ರು Idiots. ಇನ್ನು ಅದರ ನೋವು ಹೋಗಿಲ್ಲ.. : (

ಬೆಟ್ಟ ಇಳಿಯುವಾಗ ಬಸ್ಸಿಗೆ ಬಂದ್ವಿ, ರೂಮಿಗೆ ಬಂದು ಫ್ರೆಶ್ ಆಗಿ ರಾತ್ರಿಯ return journey ಗೆ ರೆಡಿ ಆದ್ವಿ.  ಎಲ್ಲರೂ ತುಂಬಾನೇ ಸುಸ್ತಾಗಿದ್ವಿ.  ರೈಲಿನಲ್ಲಿ ಮೊದಲೆ ರಿಸರ್ವೇಶನ್ ಮಾಡಿಸಿದ್ದರಿಂದ ಸೀಟಿನ ಪ್ರಾಬ್ಲಂ ಏನು ಆಗಿಲ್ಲ. ಆರಾಮಾಗಿ ನಿದ್ರೆ ಮಾಡಿ ಸೋಮವಾರ  ಬೆಳಗ್ಗೆ  7 ಗಂಟೆಗೆ ಬೆಂಗಳೂರು ಬಂದು ತಲುಪಿದ್ವಿ. ಜೀವನ ಪೂರ್ತಿ ಮರೆಯದ, ತುಂಬಾ ಖುಷಿಯಿಂದ ಟ್ರಿಪ್ ಮುಗಿಸಿದ್ವಿ. ಇಷ್ಟು ಬೇಗ 2 ದಿನ ಮುಗಿದೇ ಹೋಯ್ತಲ್ಲ ಅನ್ನೋ ಬೇಸರ  ಮಾತ್ರ ಎಲ್ಲರಲ್ಲೂ ಹಾಗೆ ಇತ್ತು.  

2 comments:

  1. Olle pravasa...Hudugru kattkondu hogodu andre nijakkoo olle anubhava...Njoi.

    ReplyDelete