Wednesday, January 5, 2011

ಹೊಸವರ್ಷದ ಪ್ರವಾಸ..

2011 ನೇ ಹೊಸವರ್ಷವನ್ನು ಸಕಲೇಶಪುರದಲ್ಲಿ ನಾವು ಮತ್ತು  ಬೇಲೂರಿನ ನಮ್ಮ ಹುಡುಗರು ಹಾಗು ಅಲ್ಲಿ ಮನೆ ಜನ ಒಟ್ಟಾಗಿ ಸೇರಿ ಸಂಜುನ  farm house ನಲ್ಲಿ  ಆಚರಿಸೋಣ ಅಂತ ಒಂದು ತಿಂಗಳು ಮುಂಚೇನೆ  ಅಕ್ಷರ ಮತ್ತು ಸಂಜು ಪ್ಲಾನ್ ಮಾಡಿದ್ರು. ನಾವೆಲ್ಲರೂ ಸರಿ ಅಂತ ಹೇಳಿದ್ವಿ. ಇಷ್ಟೆಲ್ಲಾ ಆದ್ಮೇಲೆ sudden ಆಗಿ ಸಂದೀಪಣ್ಣ (ಸಂಜು ಅಣ್ಣ) ಅತ್ತಿಗೆ, ಅವರ ಅತ್ತೆ, ಮಾವ, ಕಜ್ಹಿನ್ಸ್ ಎಲ್ಲರೂ ಅಕ್ಷರ ಮನೆಗೆ ಬಂದ್ರು. ಆಗ   new year plan ಬಗ್ಗೆ ಮಾತಾಡ್ತಾ ಅವರು, ನೀವೆಲ್ಲರೂ ನಮ್ಮ ಮನೆಗೆ ಬನ್ನಿ ಸಂಜುನ್ನ  ಕೂಡ ಅಲ್ಲಿಗೆ ಬರೋಕೆ ಹೇಳ್ತೀನಿ ನಮ್ಮೂರಲ್ಲೇ celebrate ಮಾಡೋಣ ಅಂತ ಒತ್ತಾಯ ಮಾಡಿದ್ರು. ಅತ್ತಿಗೆ, ಆಂಟಿ, ಅಂಕಲ್ ಎಲ್ಲರೂ ಅದನ್ನೇ ಹೇಳಿದ್ರು. ಹೋಗಿಲ್ಲ ಅಂದ್ರೆ ಅವರು ಬಿಡಲ್ಲ.  ಅಂತೂ ಈ  ಹೊಸ ವರ್ಷವನ್ನು ಕುಶಾಲ ನಗರ (ಮಡಿಕೇರಿ) ಹೋಗಿ ಸಂದೀಪಣ್ಣ ಅವರ family ಜೊತೆ ಆಚರಿಸೋದು ಅಂತ ತೀರ್ಮಾನ ಮಾಡಿ ಆಯ್ತು.

 ಅಮ್ಮ ಮತ್ತು ಅಕ್ಕ ಡಿಪ್ಪಿ ಅಣ್ಣ ಅವರ ಜೊತೆ new year celebration ಗೆ  ಅಂತ ಡಿಪ್ಪಿ ಹೆಂಡತಿ ಮನೆ ಕ್ಯಾಲಿಕಟ್ ಗೆ (ಕೇರಳ) ಹೋಗಿದ್ರು.  ಡಿಸೆಂಬರ್ 30 ರ ರಾತ್ರಿನೆ ನಾವೆಲ್ಲಾ ಅಕ್ಷರ ಮನೇಲಿ ಉಳಿದ್ವಿ. ಕಾರಣ ಬೆಳಗ್ಗೆ ಬೇಗ ಹೊರಡೋಣ ಅಂತ.  31 ರ ಬೆಳಗ್ಗೆ 7.30 ಗೆ  ನಾವು 4 ಜನ ಕೂಡ (ನಾನು, ಅಕ್ಷರ, P.T.(ರವಿ), ಪ್ರವೀಣ) ಆಫೀಸಿಗೆ ರಜೆ ಹಾಕಿ ಮಗೇಶನ ಕಾರಿನಲ್ಲಿ  ಹೊರಟ್ವಿ.  ಮಗೆಶನಿಗೆ ಆಫೀಸಿನಲ್ಲಿ ಜಾಸ್ತಿ ಕೆಲಸ ಇರೋದ್ರಿಂದ ರಜೆ ಸಿಕ್ಕಿಲ್ಲ. ಮೈಸೂರಿನ ಹತ್ತಿರ ಬೆಳಗ್ಗಿನ ಕಾಫಿ, ತಿಂಡಿ ಮುಗಿಸಿ ಮತ್ತೆ ನಮ್ಮ ಪಯಣ ಮುಂದು ವರೆಸಿದ್ದು. ಕುಶಾಲನಗರ ತಲುಪೋದು 1.30 ಆಯ್ತು. ಸಂದೀಪಣ್ಣ, ಅಂಕಲ್, ಆಂಟಿ ಅವರೆಲ್ಲ ನಾವು ಹೋಗೋದಕ್ಕೆ ಸರಿಯಾಗಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮನೆಗೆ ಬಂದ್ರು. ಅತ್ತಿಗೆ ಅವರೆಕಾಳಿನ ಸಾಂಬಾರ್ ತುಂಬಾ ಚೆನ್ನಾಗಿ ಮಾಡಿದ್ರು. ಒಳ್ಳೆ ಊಟ ಮಾಡಿ ರಾತ್ರಿ ಪಾರ್ಟಿಗೆ ರೆಡಿ ಮಾಡೋಕೆ ಅಡಿಗೆ ಭಟ್ರು ಹಾಗು ಪಾತ್ರೆ, ಗ್ಯಾಸ್, ಎಲ್ಲಾ ತಗೊಂಡು ತೋಟಕ್ಕೆ ಹೋದ್ವಿ. ಅಲ್ಲಿ ಸಂದೀಪಣ್ಣ ಫ್ಯಾಮಿಲಿ ಫ್ರೆಂಡ್  ಮನೆ ಇದೆ. ಅವರ ಮನೆ  Location  ಮಾತ್ರ ತುಂಬಾ, ಅಂದ್ರೆ ತುಂಬಾ ಚೆನ್ನಾಗಿತ್ತು. ಅಡಿಗೆಯವರು ಎಲ್ಲಾ ರೆಡಿ ಮಾಡೋವರೆಗೆ ನಾವು ಸ್ವಲ್ಪ ರೆಸ್ಟ್ ತಗೊಂಡ್ವಿ..

ಸಂಜೆ 7 ಗಂಟೆ ಸುಮಾರಿಗೆ ಫ್ರೆಂಡ್ಸ್, ಫ್ಯಾಮಿಲಿ ಜನ ಎಲ್ಲಾ ಬಂದು ಸೇರಿಕೊಂಡರು. 8.30 ಯಿಂದ fire camp ಶುರು ಮಾಡಿ, ಹಾಡು, ಡಾನ್ಸ್, ಕ್ವಿಜ್, ಜೋಕ್ಸ್, ಹೀಗೆ ತುಂಬಾ ಚೆನ್ನಾಗಿ  ಎಂಜಾಯ್ ಮಾಡಿ 12 ಗಂಟೆಗೆ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸ್ವಾಗತಿಸಿದ್ವಿ. ತೋಟದಿಂದ ಮನೆಗೆ ಬಂದು ಮತ್ತೆ  ಅದು , ಇದು  ಮಾತನಾಡಿ ಮಲಗೋದು  2.30 am ಆಯ್ತು .

ಜನವರಿ 1 ನೇ ತಾರೀಖು ಬೆಳಗ್ಗೆ  8 ಗಂಟೆಗೆ ಎದ್ದು ಸ್ನಾನ, ತಿಂಡಿ  ಅಂತೆಲ್ಲ ಮುಗಿಸಿ ಕುಶಾಲ ನಗರದಿಂದ 11 ಗಂಟೆಗೆ ಕ್ಯಾಲಿಕಟ್ (ಕೇರಳ) ದಾರಿ ಹಿಡಿದ್ವಿ. ರಸ್ತೆ ಅಷ್ಟೇನೂ ಚೆನ್ನಾಗಿಲ್ಲ. ಘಾಟಿಯಲ್ಲಿ ಒಳ್ಳೆ ಜಾಗ ಏನಾದ್ರು ಸಿಕ್ಕಿದ್ರೆ ಫೋಟೋ ಗೆ, ಊಟಕ್ಕೆ, ಅಂತ ಸಿಕ್ಕಿದ ಕಡೆಗೆಲ್ಲ ಕಾರ್ ನಿಲ್ಲಿಸಿ, ಮಾಹೆ, ಪಾಂಡಿಚೆರಿ ಮಾರ್ಗವಾಗಿ ಸಂಜೆ 6 ಗಂಟೆಗೆ ಕ್ಯಾಲಿಕಟ್ ನಲ್ಲಿರೋ ಡಿಪ್ಪಿ ಅಣ್ಣನ ಮಾವನ ಮನೆಗೆ ತಲುಪಿದ್ವಿ. ಅಲ್ಲಿ ಅಮ್ಮ, ಅಕ್ಕ, ಅತ್ತಿಗೆ, ಬೇಲೂರಿನ ಆಂಟಿ-ಅಂಕಲ್, ಎಲ್ಲರೂ ಬಂದಿದ್ರು. ಅಲ್ಲಿ ಮತ್ತೆ ಮಾತು, ಜೋಕ್ಸ್, ನಗು, ರೇಗಿಸೋದು ಅಂತ ಮಾಡ್ಕೊತ ಮಲಗೋದು 1.30 am ಆಗೇ ಹೋಯ್ತು.

ಮಾರನೆ ದಿನ ಅಂದ್ರೆ ಜನವರಿ 2 ರ ಬೆಳಗ್ಗೆ fresh ಆಗಿ, ತಿಂಡಿ ತಿಂದು ಕ್ಯಾಲಿಕಟ್ ನಿಂದ ಹೊರಟ್ವಿ. ಕೇರಳದ ಬಾಳೆಕಾಯಿ  ಚಿಪ್ಸ್ ತಗೊಂಡ್ವಿ.  ವಯನಾಡು, ಬಂಡೀಪುರ, ಮೈಸೂರ್  ಮಾರ್ಗವಾಗಿ ಬೆಂಗಳೂರು ಬರೋದು ಅಂತ ಆಯ್ತು. 380 ಕಿಲೋಮೀಟರು ಆಗತ್ತೆ. ಮತ್ತೆ ಮಧ್ಯ, ಮಧ್ಯ ನಿಲ್ಲಿಸ್ಕೋತ, ಫೋಟೋಸ್ ತಗೋತ ಬರ್ತಾ ಇದ್ವಿ. ಇನ್ನೇನು ಕೇರಳ ಗಡಿ ಮುಗಿಯೋದು 50 km ಇದೆ ಅನ್ನೋವಾಗ ಕೇರಳ ಹೈ ವೇ ಪೊಲೀಸರು ನಮ್ಮ ಕಾರ್ ನಿಲ್ಲಿಸಿದರು. Documents ಎಲ್ಲದನ್ನು  ತೋರಿಸಿದ್ವಿ. ನಮ್ಮ ಗ್ರಹಚಾರಕ್ಕೆ, ಇನ್ಸೂರೆನ್ಸ್ ಅವಧಿ ಮುಗಿದೇ ಹೋಗಿತ್ತು. ಹಾಗು ಕಾರಿನ original records ಮನೇಲೆ ಬಿಟ್ಟು  ಹೋಗಿದ್ವಿ.  ಅಲ್ಲಿನ ಪೊಲೀಸರಿಗೆ ಮಲೆಯಾಳಿ ಬಿಟ್ಟರೆ ಬೇರೆ ಭಾಷೆ ಬರ್ತಾ ಇರಲಿಲ್ಲ. ನಾವೆಲ್ಲಾ 2000 ರೂಪಾಯಿ ಹೋಯ್ತು ಅನ್ಕೊತಾ ಇದ್ವಿ. ಅವರನ್ನ ಒಪ್ಪಿಸೋ ಹೊತ್ತಿಗೆ ಅಕ್ಷರ ಮತ್ತು ಪ್ರವೀಣ್ ಗೆ ಸಾಕಾಗಿ ಹೋಯ್ತು. ಇನ್ನೊಂದು ವಿಶೇಷ ಅಂದ್ರೆ ಇಷ್ಟೆಲ್ಲಾ ನಮ್ಮದೇ ತಪ್ಪು ಇದ್ರು ಕೂಡ ಬರಿ Rs. 300/- ಫೈನ್ ಅಂತ ತಗೊಂಡು ರಸೀಧಿ ಕೊಟ್ರು. ಅದೇ ಖುಷಿ ನಮಗೆ. ಅಲ್ಲಿಂದ ಕರ್ನಾಟಕ ಬಾರ್ಡರ್ ಒಳಗೆ ಬಂದು, ಬಂಡೀಪುರದಲ್ಲಿ ರಸ್ತೆನಲ್ಲಿ ತುಂಬಾ ದೂರ ಬಾರೋ ವರೆಗೆ ಎಲ್ಲೂ ಕಾರ್ ನಿಲ್ಲಿಸಲೇ ಇಲ್ಲ.  ಬಂಡೀಪುರ ಕಾಡಿನಲ್ಲಿ ರಸ್ತೆ ಅಂಚಿನಲ್ಲೇ ಆನೆಗಳು ಕಾಣಿಸಿದವು. ಆದರೆ ಫೋಟೋಗೆ ಸಿಗಲೇ ಇಲ್ಲ.

ಮಧ್ಯಾಹ್ನ ಊಟಕ್ಕೆ ಗುಂಡ್ಲುಪೇಟೆ ಗಿಂತ ಮುಂಚೆ ಊಟಕ್ಕೆ ನಿಂತ್ವಿ. ಹೊರಗಡೆಯಿಂದ ನೋಡಿದ್ರೆ ತುಂಬಾ ಲಕ್ಷುರಿ ಅನ್ನಿಸೋ ಹೋಟೆಲ್. ಒಳಗೆ ಹೋದರೆ ನಾವು ಕೇಳಿದ್ದು ಏನು ಇರಲಿಲ್ಲ. ಹೋಟೆಲ್ನಲ್ಲಿ ಇರೋದ್ನ ಹೋಟೆಲಿನ ಮಾಣಿ  ತಂದು ಕೊಟ್ಟ ನಾವು ತಿಂದ್ಕೊಂಡು ಸುಮ್ನೆ ಎದ್ದು ಬಂದ್ವಿ. ರಾತ್ರಿ ಮೈಸೂರ್, ಬೆಂಗಳೂರು ರಸ್ತೆ ತುಂಬಾ ಟ್ರಾಫಿಕ್ ಇತ್ತು. 8 ಗಂಟೆ ಹೊತ್ತಿಗೆ ಮಂಡ್ಯದಲ್ಲಿ ಒಂದು ಧಾಬದಲ್ಲಿ ಒಳ್ಳೆ ಊಟ ಮಾಡಿ, ಬೆಂಗಳೂರು ಮುಟ್ಟಿದ್ದು ರಾತ್ರಿ 10.30 ಆಯ್ತು. ಹೊಸವರ್ಷ ಒಳ್ಳೆ ರೀತಿನಲ್ಲಿ ಶುರು ಆಗಿದೆ. ಮುಂದೆ ಹೇಗೆ ಅಂತ ನೋಡ್ಬೇಕು.


No comments:

Post a Comment