Wednesday, March 2, 2011

 ಸಾಗರ ಜಾತ್ರೆ ಹಾಗು ಸಾಗರ ಸುತ್ತ ಮುತ್ತ ತಿರುಗಾಟ..
 
24/02/2011, ಗುರುವಾರ ರಾತ್ರಿ 10.30 ರ ಗಜಾನನ ಬಸ್ಸಿಗೆ ಅಕ್ಷರ, ಅಕ್ಷರ ಅಮ್ಮ, ಅಕ್ಕ, ರವಿ(P.T) ಮತ್ತು ನಾನು ಸಾಗರಕ್ಕೆ ಹೊರಟ್ವಿ. ಸಾಗರದ ಮಾರಿಕಾಂಬ ಜಾತ್ರೆಗೆ ಹಾಗೂ ಅಲ್ಲಿ ಸುತ್ತ, ಮುತ್ತ ಓಡಾಡಿಕೊಂಡು ಬರೋದು ನಮ್ಮ plan. ಶುಕ್ರವಾರ ಬೆಳಗ್ಗೆ 6.30 ಗೆ ಸಾಗರ ತಲುಪಿದ್ವಿ. ಅಕ್ಷರನ ಅತ್ತೆ ಮನೆಗೆ ಹೋಗಿ ಫ್ರೆಶ್ ಆದ್ವಿ. ಅಲ್ಲಿಂದ ನಾನು ನಮ್ಮೂರಿಗೆ ಹೊರಟೆ. ಮನೆಗೆ ಹೋಗಿ ಸ್ನಾನ, ತಿಂಡಿ ಮುಗಿಸಿ ತಕ್ಷಣ ಸಾಗರ ಬಂದು ಇವರನ್ನೆಲ್ಲ ಕೂಡಿಕೊಂಡೆ. ಸಾಗರ ಪೇಟೆಯಲ್ಲಿ ಸ್ವಲ್ಪ ಕೆಲಸಗಳಿತ್ತು ಅದನ್ನೆಲ್ಲ ಮುಗಿಸಿ ಮತ್ತೆ ಅತ್ತೆ ಮನೆಗೆ ಬಂದು ಊಟ ಮಾಡಿ, ಸ್ವಲ್ಪ ರೆಸ್ಟ್ ಮಾಡಿದ್ವಿ. ಸಂಜೆ 6 ಗಂಟೆ ಸುಮಾರಿಗೆ ಎಲ್ಲರೂ ಜಾತ್ರೆಗೆ ಹೋಗೋದು ಅಂತ ತೀರ್ಮಾನ ಮಾಡಿ ಹೊರಟಿದ್ದಾಯ್ತು. ಅಮ್ಮ, ಅಕ್ಕ ಹಾಗೂ ಬೇರೆ ನೆಂಟರನ್ನೆಲ್ಲ ಒಟ್ಟಿಗೆ ಕಳಿಸಿ ನಾವು ಜಾತ್ರೆಗೆ ಹೋದ್ವಿ. ಅಲ್ಲಿ ಮಂಕಾಳೆ ಸಂದೀಪ ಹಾಗೂ ಮಂಕಾಳೆ ಹುಡುಗ್ರು ನಮ್ಮ ಜೊತೆ ಸೇರಿದರು. ಬಸ್ ಸ್ಟ್ಯಾಂಡ್ ನಿಂದ, ಪೋಸ್ಟ್ ಆಫೀಸ್ ಹತ್ತಿರ ಬರುವ ಹೊತ್ತಿಗೆ ಆ ಗಲಾಟೆ, ಆ ಜನ ಜಂಗುಳಿ ನೋಡಿ ತಲೆ ಕೆಟ್ಟ ಹಾಗೆ ಆಯ್ತು. ಮೊದಲೆಲ್ಲ ಇದೆ ಜಾತ್ರೆನಲ್ಲಿ ಸಂಜೆ 5 ಗಂಟೆಗೆ  ಬಂದ್ರೆ ಬೆಳಗಿನ ಜಾವ 3 ಗಂಟೆ ವರೆಗೂ ಇರ್ತ ಇದ್ವಿ. ಈಗ ಅರ್ಧ ಗಂಟೆ ಇರೋದಕ್ಕೂ  ಆಗ್ತಾ ಇಲ್ಲ.  ಏನೋ ಕಿರಿಕಿರಿ. ಯಾವಾಗ ಇಲ್ಲಿಂದ ಹೋಗ್ತಿನೋ ಅನ್ನಿಸುವಷ್ಟು ಹಿಂಸೆ. ನನ್ನದೇ ಸ್ಥಿತಿ ಅಕ್ಷರ ಮತ್ತು P . T  ಗೆ ಕೂಡ ಆಗಿತ್ತು. 

ಸೀದಾ ಪೋಸ್ಟ್ ಆಫೀಸ್ ಡೌನ್ ನಲ್ಲೆ ಇಳಿದು ಮಾರಿಗುಡಿ ಹಿಂಭಾಗದ 'ಪಡಿಯಾರ್' ಅಂಗಡಿಗೆ ಬಂದು ಕೂತಿದ್ದಾಯ್ತು. ಅಲ್ಲೇ ತುಂಬಾ ಜನ ಹಳೆಯ ಗೆಳೆಯರು ಸಿಕ್ಕಿದರು. ಅಷ್ಟರಲ್ಲಿ ನಮ್ಮ ಮಂಕಾಳೆ ಸಂದೀಪ ಜಾತ್ರೆ ಮುಗಿಸಿ ಬಂದು ನಮ್ಮ ಜೊತೆ ಸೇರಿಕೊಂಡ. ನಾವು 4 ಜನ ಹೋಟೆಲ್ ಗೆ ಹೋಗಿ ಹೊಟ್ಟೆ ತುಂಬಾ ಅಕ್ಕಿ ರೊಟ್ಟಿ ತಿಂದು ಮನೆಗೆ ಬಂದ್ವಿ. ನಮ್ಮ ಇನ್ನೊಬ್ಬ ಬೇಲೂರಿನ ದೋಸ್ತ್  ಸಂಜು  ರಾತ್ರಿ ಮನೆಗೆ ಬಂದು ನಮ್ಮ ಜೊತೆ ಸೇರಿದ.
ಇನ್ನು ಶನಿವಾರ ಆರಾಮಾಗಿ ಎದ್ದು, ಸ್ನಾನ, ತಿಂಡಿ ಮುಗಿಸಿ,  ವರದಳ್ಳಿಗೆ ಹೋಗೋಣ ಅಂತ ಹೊರಟ್ವಿ. ಮತ್ತೆ ನಾವು 4 ಜನ ಪಡಿಯಾರ್ ಅಂಗಡಿಗೆ ಬಂದ್ವಿ. ಅಷ್ಟೊತ್ತಿಗೆ ಮಂಕಾಳೆ ಸಂದೀಪ ಕೂಡ ಬಂದಿದ್ದ. ಕಾರ್ ತಗೊಂಡು ವರದಳ್ಳಿಗೆ 5 ಜನ ಹೋದ್ವಿ. ದರ್ಶನ ಮಾಡಿ, ಧರ್ಮ ಧ್ವಜಕ್ಕೆ ಹೋಗಿ ಬಂದು ಊಟ ಮಾಡಿ ಹೆಗ್ಗೋಡಿನ ನೀನಾಸಂ ಗೆ ಹೊರಟ್ವಿ. ನೀನಾಸಂ ನೋಡಿ, ಅಲ್ಲೇ ಖಾದಿ ವಸ್ತ್ರದ ಅಂಗಡಿ "ಚರಕ" ದಲ್ಲಿ ಎಲ್ಲರೂ ಬಟ್ಟೆ ತಗೊಂಡ್ವಿ.

ಹೆಗ್ಗೋಡಿನಿಂದ  ಸಾಗರ ಬಂದು  ಬೆಳೆಯೂರಿನ ನಮ್ಮನೆಗೆ ಅಕ್ಕ , ಅಮ್ಮ ಜೊತೆ ಹೋಗಿದ್ದಾಯ್ತು. ಮನೆಯಲ್ಲಿ ಅಮ್ಮ ಮಾಡಿದ ಕಾಫಿ ಮತ್ತು ಸ್ನಾಕ್ಸ್  ತಿಂದು ಸಾಗರ ಬಂದ್ವಿ. ಮತ್ತೆ ಜಾತ್ರೆ ಪೇಟೆ ಒಮ್ಮೆ ದೂರದಿಂದ ನೋಡಿ ನಮ್ಮ ಮಾಮೂಲಿ 'ಅಡ್ಡಾ' ಗೆ ಬಂದು ಕೂತ್ವಿ. ನಮ್ಮ ಜೊತೆ  ಇವತ್ತಿನ ಹೊಸ ಅಥಿತಿ ನಮ್ಮ ಸಂಜು. ಲೇಟ್ ಆಗಿ ಮಂಕಾಳೆ ಸಾಹೇಬರು ನಮ್ಮ ಜೊತೆ ಸೇರಿದರು. ಮತ್ತೆ ಮಾತು ಮಾತು ಮಾತು... ಚನ್ನಾಗಿ ಎಂಜಾಯ್ ಮಾಡಿದ್ವಿ. ಮನೆಗೆ ಹೋಗಿ ಮಲಗುವಾಗ 11 ಗಂಟೆ ದಾಟಿತ್ತು. 

ಭಾನುವಾರ ಬೆಳಗ್ಗೆ ಅಂದ್ರೆ 27 ಗೆ ಸಿಗಂದೂರಿಗೆ ಹೋಗೋದು ಅಂತ ಮೊದಲೇ ತೀರ್ಮಾನ ಮಾಡಿದ್ವಿ. ಅದೇ ಕಾರಿನಲ್ಲಿ  ನಾವಿಷ್ಟು ಜನ ಹುಡುಗರು ಹಾಗು ಅಮ್ಮ, ಅಕ್ಕ ಹೊರಟ್ವಿ. ಹೊಳೆಬಾಗಿಲು ತಲುಪಿದಾಗ ತುಂಬಾ ರಶ್ ಇತ್ತು. ತಿಂಡಿ ಮುಗಿಸಿ ಇನ್ನೊಂದು  ಲಾಂಚ್  ಬರುವವರೆಗೆ ಕಾದು ಸಿಗಂದೂರಿಗೆ ತಲುಪಿದ್ವಿ. ತಾಯಿ ಚೌಡೇಶ್ವರಿ ದರ್ಶನ ಮುಗಿಸಿ ಮತ್ತೆ ಲಾಂಚ್ ನಲ್ಲಿ ಹೊಳೆಬಾಗಿಲು ಬಂದು ನಾವು ತಂದಿರುವ ಬುತ್ತಿ  ತಿಂದು ಸಾಗರ ಕಡೆಗೆ ನಮ್ಮ ಪಯಣ ಮುಂದುವರೆಸಿದ್ವಿ. ಸಾಗರಕ್ಕೆ ಬರುವಾಗ 3 ಗಂಟೆ ಆಯ್ತು. ಮನೆಗೆ ಬಂದು ಕ್ರಿಕೆಟ್ ಮ್ಯಾಚ್ ನೋಡ್ತಾ ಕಾಲ ಕಳೆದ್ವಿ. ರಾತ್ರಿ ಊಟ ಮುಗಿಸಿ ಒಳ್ಳೆ ಟ್ರಿಪ್ ನ ಮಜಾ ಹಾಗು ನಾಳೆಯಿಂದ ಬೆಂದಕಾಳೂರಿನಲ್ಲಿನ ಆಫೀಸ್ ಕೆಲಸ ನೆನೆಯುತ್ತ  ಮೊದಲೇ ಕಾಯ್ದಿರಿಸಿದ್ದ ಬೆಂಗಳೂರಿನ ಬಸ್ ಹತ್ತಿದ್ವಿ.

1 comment:

  1. ಹ್ವಾಯ್ ವಿನಯಣ್ಣ ... ನಂದೂ ಸಾಗರ ಮಾರಾಯ. ಚೆಂದ ಬರದ್ಯೋ .. ಈ ಸಲದ ಗಣಪತಿ ಜಾತ್ರೆಗೆ ಬರಕಿತ್ತೋ ನೀನು.. ಮತ್ತದೇ ಹಳೇ ನೆನ್ಪುಗಳೆಲ್ಲಾ ಕಾಡ್ತಿದ್ವೋ ಎಂತೋ .. ಸುಮಾರು ಹಳೇ ಪೋಸ್ಟಿಗೆ ಭಯಂಕರ ಲೇಟಾಗಿ ಪ್ರತಿಕ್ರಿಯಿಸ್ತಿದ್ದಿ . ಕ್ಷಮೆಯಿರ್ಲೋ ...

    ReplyDelete